Snehapriya.com

June 9, 2025

ಪ್ರೀಮಿಯರ್ ಶೋ ಗೆದ್ದ ಚಾರ್ಲಿ 777

Social Share :

ಇನ್ನು ಸಿನಿಮಾ ಬಿಡುಗಡೆ ಕಂಡಿಲ್ಲ; ಆದರೆ ಜನ ಮೆಚ್ಚುಗೆಯಲ್ಲಿ ಮುಂದಿದೆ..

ಅರೇ.. ಇದು ಹೇಗೆ.. ಎಂದು ಯಾರಾದರೂ ಅಂದು ಕೊಳ್ಳಬಹುದು. ಆದರೆ ನಿಜವಾಗಿ
ಅಂತಹ ಸಾಧ್ಯತೆಗಳನ್ನು ತೆರೆದಿಟ್ಟಿರುವುದು ಪ್ರೀಮಿಯರ್ ಶೋ..ಗಳು..

ಹಾಗೆಂದು ಹೇಳಿಕೊಂಡಿತು ಚಿತ್ರತಂಡ. ಸ್ಟಾರ್ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಪ್ರೀಮಿಯರ್ ಶೋಗಳ ಬಗ್ಗೆ ತಂಡ ವಿವರ ನೀಡಿತು. ಮುಖ್ಯವಾಗಿ ನಿರ್ಮಾಪಕ ಮತ್ತು ಮುಖ್ಯ ಪಾತ್ರದಲ್ಲಿರುವ ರಕ್ಷಿತ್ ಶೆಟ್ಟಿ ಚಿತ್ರದ ಆಶಯಗಳ ಬಗ್ಗೆ ಮಾತನಾಡಿದರು.

ದೆಹಲಿ, ಮುಂಬೈ ಹಾಗೂ ದೇಶದ ಅನೇಕ ಭಾಗಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ಈ ಸಂದರ್ಭಗಳಲ್ಲಿ ಪ್ರಾಣಿ ಪ್ರಿಯರು ಹೆಚ್ಚಿಗೆ ಭಾಗವಹಿಸಿ ಸಿನಿಮಾ ಬಗ್ಗೆ ಹೆಚ್ಚಿನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರೀಮಿಯರ್ ಶೋ ಹೊರ ರಾಜ್ಯಗಳಲ್ಲಿ ಮೊದಲೇ ಏಕೆ ಎಂಬುದಕ್ಕೆ, ನಮ್ಮ ಬಗ್ಗೆ ತಾಯಿ ನೆಲದಲ್ಲಿ ಎಲ್ಲವೂ ಗೊತ್ತಿರುತ್ತದೆ. ಹೊರಗಿನವರಿಗೆ ಮೊದಲೇ ಪರಿಚಯಿಸುವ ಆಶಯದಲ್ಲಿ ಮಾಡಿದೆವು ಎಂದ ಚಿತ್ರತಂಡ, ಬೆಂಗಳೂರಿನಲ್ಲಿ ಸೋಮವಾರ ಪ್ರೀಮಿಯರ್ ಶೋ ಏರ್ಪಡಿಸಿದ ಮಾಹಿತಿ ಕೊಟ್ಟಿತು.

ಚಾರ್ಲಿ ಪಾತ್ರದಲ್ಲಿರುವುದು ಹೆಣ್ಣು ನಾಯಿ; ಅದರ ಸಾಮರ್ಥ್ಯ ಕುರಿತು ವಿವರಗಳು ಬಂದವು. ನಾಯಿಗಳಿಗೆ ತರಬೇತಿ ನೀಡುವ ಪ್ರಮೋದ್ ವಿವರ ಕೊಟ್ಟರು.

ಚಿತ್ರವು ಹೊರ ರಾಜ್ಯದಲ್ಲಿ ಸುಮಾರು 300 ಪರದೆ ಆವರಿಸಿಕೊಳ್ಳಲಿದೆ. ಓವರ್ ಸಿಸ್ ಗೆ ಕೆಆರ್ ಜಿ ಮೂಲಕ ಸುಮಾರು ಏಳು ನೂರು ಅಥವಾ ಅದನ್ನು ಮೀರಿ ಸಂಖ್ಯೆಯ ಪರದೆಗಳಲ್ಲಿ ಬಿಡುಗಡೆ ಕಾಣುತ್ತದೆ ಎಂಬ ಉತ್ತರ ಕೊಟ್ಟವರು ಕಾರ್ತಿಕ್ ಗೌಡ.

ಇದು ವಿಶೇಷ ಎಂಬುದಕ್ಕೆ ಬಹಳಷ್ಟು ಕಾರಣಗಳಿವೆ ಎಂದವರು ನಿರ್ದೇಶಕ ಕಿರಣ್ ರಾಜ್. ಸಂಗೀತ ನಿರ್ದೇಶಕ ನೋಬಿನ್ ಪಾಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ನಟಿ ಸಂಗೀತ ಶೃಂಗೇರಿ, ಬಾಲನಟಿ ಶಾರ್ವರಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *