Snehapriya.com

June 9, 2025

ಸುದೀಪ್ ವಿಕ್ರಾಂತ್ ರೋಣ ರಕ್ಕಮ್ಮಾ ರೀಲ್ಸ್ ಹಾಟ್ ಫೇವರಿಟ್

Social Share :

ಟಿಕ್ ಟಾಕ್ ಇಲ್ಲವಾದ ಬಳಿಕ ಅದಕ್ಕಿಂತಲೂ ಸುಲಭವೆನಿಸುವ ರೀಲ್ಸ್ ಈಗ ಜನಪ್ರಿಯತೆಯ ತುತ್ತ ತುದಿಯಲ್ಲಿದೆ..

ಅದೇ ರೀತಿ ರೀಲ್ಸ್ ನಲ್ಲಿ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಚಿತ್ರದ ‘ರಾ.ರಾ.ರಕ್ಕಮ್ಮ’ ಹಾಡು ಸಹ ಸದ್ಯದ ಟಾಪ್ ಲೀಸ್ಟ್ ನಲ್ಲಿದೆ..

ಜಾಕ್ ಮಂಜು ನಿರ್ಮಾಣದ ‘ವಿಕ್ರಾಂತ್ ರೋಣ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಮುಖ್ಯವಾಗಿ ಇದು ಪಾನ್ ಇಂಡಿಯಾ ಸಿನಿಮಾ.. ಬಹು ಮುಖ್ಯವಾಗಿ ಪ್ರಪಂಚದ ಎತ್ತರದ ಗೋಪುರ ದುಬೈನ ‘ಬುರ್ಜಾ ಖಲೀಪ’ ಮೇಲೆ ಕನ್ನಡದ ಕೀರ್ತಿ ಪತಾಕೆ ಹಾರಿಸುವ ಮೂಲಕ ಇಡೀ ವಿಶ್ವ ಹಾಗೂ ಭಾರತೀಯ ಚಿತ್ರೋದ್ಯಮದ ಗಮನ ಸೆಳೆದ ಚಿತ್ರ.

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು ಚಿತ್ರದ ಹೈಲೈಟ್ ಎಂದುಕೊಂಡರೆ, ಅದೇ ಹಾಡು ಪ್ರತಿ ಅಭಿಮಾನಿಗಳಿಗೆ ಕಚಗುಳಿ ಇಡುತ್ತಿರುವುದು ಮತ್ತು ರೀಲ್ಸ್ ನಲ್ಲಿ ಸೆಲೆಬ್ರಿಟಿಗಳೇ ಹುಚ್ಚೆದ್ದು ಕುಣಿಯುತ್ತಿರುವುದು ಚಿತ್ರದ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ರೀಲ್ಸ್ ನಲ್ಲಿ ಇಲ್ಲಿಯವರೆಗೂ ಗೋವಿಂದ ಅವರ ‘ಕುದ್ ಗರ್ಜ್’ ಚಿತ್ರದ ‘ಆಪ್ ಕೆ ಆ ಜಾನೆ..’ ಇನ್ಸ್ಟ್ರುಮೆಂಟಲ್ ಸಾಂಗ್ ಟ್ರೆಂಡಿಂಗ್ ನಲ್ಲಿತ್ತು. ಈಗ ‘ರಾ ರಾ ರಕ್ಕಮ್ಮಾ’ ಹಾಡು ಅದನ್ನು ಮೀರಿಸಿ ನಡೆದು ಬಿಟ್ಟಿದೆ.

ಜಾಕ್ ಮಂಜು ಮತ್ತು ಕಿಚ್ಚಾ ಸುದೀಪ್ ಕನಸಿನ ‘ವಿಕ್ರಾಂತ್ ರೋಣ’ ಆಗಸ್ಟ್ ಮೂರನೇ ವಾರದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ರಾರಾ ರಕ್ಕಮ್ಮಾ ಮಾತ್ರವಲ್ಲ; ಬೇಕಾದಷ್ಟು ಥ್ರಿಲ್ಲಿಂಗ್ ಅಂಶಗಳಿವೆ.

ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ವಿದೆ.

ಶಾಲಿನಿ ಆರ್ಟ್ಸ್ ಮೂಲಕ ಶಾಲಿನಿ ಮಂಜುನಾಥ್ ಹಾಗೂ ಜಾಕ್ ಮಂಜುನಾಥ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್, ನಿರೂಪ್ ಭಡಾರಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *