Snehapriya.com

June 9, 2025

ಹೆಣ್ ಹೆಣ್ಮಕ್ಳ ಮೋಹಪಾಶ ಕತ್ರಾ ಡೆಂಜರಸ್ : ಆರ್.ಜಿ.ವಿ ಹೊಸ ಚಿತ್ರ..

Social Share :

ಭಾರತೀಯ ಚಿತ್ರರಂಗ ಕಂಡ ಅತ್ಯಂತ ರಸಿಕ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ರಾಮ್ ಗೋಪಾಲ್ ವರ್ಮಾ ತಮ್ಮ ರಸಿಕತೆಯನ್ನು ಇನ್ನಷ್ಟು ಮತ್ತಷ್ಟು ಎಂದು ತೆರೆಯ ಮೇಲೆ ರೋಚಕಗೊಳಿಸಿದ್ದೇ ಹೆಚ್ಚು…

ಈಗ ಅವರ ಕೈಗೆ ಸಿಕ್ಕಿರುವುದು ಹೆಣ್ಣು ಸಲಿಂಗಕಾಮಿಗಳ ಕಥೆ. ಬಿಡುತ್ತಾರೆಯೇ.. ಪ್ರೇಕ್ಷಕ ಹಸಿಬಿಸಿ ದೃಶ್ಯಗಳನ್ನು ಕಣ್ಣಿನಲ್ಲಿಯೇ ಚಪ್ಪರಿಸುವಷ್ಟು ದೃಶ್ಯಗಳನ್ನು ಮೊಗೆದು ಕೊಟ್ಟಿದ್ದಾರೆ.

ಅಂದ ಹಾಗೆ ಅವರ ಹೊಸ ಚಿತ್ರದ ಹೆಸರು ‘ಕತ್ರಾ ಡೆಂಜರಸ್’. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತದೆ. ಸ್ವತಃ ನಿರ್ಮಾಪಕರು ಆಗಿರುವ ರಾಮ್ ಗೋಪಾಲ್ ವರ್ಮ, ಭಾರತೀಯ ಮಟ್ಟದಲ್ಲಿ ಮೊದಲ ಮಹಿಳೆಯರ ಸಲಿಂಗಕಾಮದ ಚಿತ್ರವಿದು ಎಂದು ಸಮರ್ಥಿಸಿಕೊಂಡಿದ್ದಾರೆ.

‘ಸಲಿಂಗಕಾಮವನ್ನು ಸುಪ್ರೀಂ ಕೋರ್ಟ್ ಸಹ ಸಮ್ಮತಿಸಿದೆ. ಆದ್ದರಿಂದ ಇದರ ಬಗ್ಗೆ ನಾನು ಹೇಳುವುದೇನಿದೆ. ಹಿಂದೆ ಫೈರ್ ಎಂಬ ಚಿತ್ರ ಬಂದಿತ್ತು. ಆದರೆ ಪೂರ್ಣ ವಸ್ತುವಾಗಿರಲಿಲ್ಲ. ಹಾಗಾಗಿ ಈ ಚಿತ್ರ ಮೊದಲ ಚಿತ್ರವಾಗುತ್ತದೆ’ ಎಂಬ ಸಮರ್ಥನೆಯನ್ನೂ ಮುಂದಿಟ್ಟರು ಆರ್.ಜಿ.ವಿ.

ಪ್ರಾದೇಶಿಕ ಭಾಷೆಗಳಲ್ಲಿ ಈ ರೀತಿಯ ಚಿತ್ರ ಬಂದಿರಬಹುದು. ಆದರೆ ನಾನು ಗಮನಿಸಿಲ್ಲ; ಈ ರೀತಿ ಬಹಳ ಚಿತ್ರಗಳು ಬಂದಿವೆ‌ ಎಂದರೆ ನೀವೇ ಹೆಸರು ತಿಳಿಸಿ ಎಂದು ಎದುರಿಗಿದ್ದ ಪತ್ರಕರ್ತರಿಗೇ ಸವಾಲು ಹಾಕಿದರು.

ನೇನಾ ಗಂಗೂಲಿ ಹಾಗೂ ಅಪ್ಸರಾರಾಣಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಅವರೂ ಸಹ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಬೆಂಗಳೂರು, ಚೆನ್ನೈ ಹಾಗೂ ಹೈದ್ರಾಬಾದ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೇ ಏ.8ರಂದು ‘ಕತ್ರಾ ಡೆಂಜರಸ್’ ದೇಶವ್ಯಾಪಿ ಬಿಡುಗಡೆ ಕಾಣುತ್ತಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *