Snehapriya.com

June 8, 2025

ಪ್ರೇಮಿಗಳಿಗೆ ಲವ್ ಮಾಕ್ ಟೈಲ್2 11ಕ್ಕೆ ಚಿತ್ರಮಂದಿರಗಳಲ್ಲಿ

Social Share :

ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳಿಗೊಂದು ವಿಶೇಷ ದಿನ ಬರುತ್ತದೆ. ಆ ದಿನ ಪ್ರೇಮದ ಪ್ರಸ್ತಾಪ ಮಹತ್ವ ಪಡೆಯುತ್ತದೆ. ಹಾಗೆಯೇ ಪ್ರೇಮದ ವಿಷಯದಲ್ಲಿ ಮೂಡಿಬಂದಿರುವ ಚಿತ್ರಗಳು ಬಿಡುಗಡೆಯ ತವಕದಲ್ಲಿ ಇರುತ್ತವೆ..

ಈಗ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿರುವ ‘ಲವ್ ಮಾಕ್ ಟೈಲ್2’ರ ಸರದಿ. ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಅತ್ಯಂತ ಲವಲವಿಕೆಯಿಂದ ಪಾಲ್ಗೊಂಡಿತ್ತು ಚಿತ್ರತಂಡ. ಮುಖ್ಯವಾಗಿ ಲವ್ ಮ್ಯಾರೇಜ್ ಆಗಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್.

ವೇದಿಕೆಯ ಮುಖ್ಯ ಸ್ಥಾನದಲ್ಲಿ ನಿಂತು ಚಿತ್ರದ ವಿವರಗಳನ್ನು ನೀಡುತ್ತಲೇ ಎಲ್ಲವನ್ನು ನಿರ್ವಹಿಸಿದರು ಮಿಲನಾ ನಾಗರಾಜ್. ಚಿತ್ರ ಕರ್ನಾಟಕವಲ್ಲದೆ ಲಡಾಕ್ ನಂತಹ ಶೀತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿರುವ ಹೆಚ್ಚುಗಾರಿಕೆಯನ್ನು ತೆರೆದಿಟ್ಟಿತು ಚಿತ್ರತಂಡ. ಟೀಸರ್ ನಲ್ಲಿ ಶ್ರೀಕ್ರೇಜಿಮೈಂಡ್ ಅವರ ಛಾಯಾಗ್ರಹಣ ಮುಖ್ಯವಾಗಿ ಗಮನ ಸೆಳೆಯಿತು.

ಲವ್ ಮಾಕ್ ಟೈಲ್ ಚಿತ್ರಮಂದಿರಗಳಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಆದರೆ ಓಟಿಟಿ ಮತ್ತು ಇತರೆಡೆ ಅಭೂತಪೂರ್ವ ಮೆಚ್ಚುಗೆ ಪಡೆಯಿತು. ಇದರಿಂದ ಮುಂದೆ ಅದರ ಮಾದರಿಯನ್ನೇ ಅನುಸರಿಸಿ ಮಾಡಿರುವ ಚಿತ್ರವಿದು ಎಂಬ ವಿವರ ಬಂತು.

ಲವ್ ಮಾಕ್ಟೇಲ್ ಚಿತ್ರದ ಟೈಟಲ್‌‌ನಲ್ಲೇ ಒಂದು ಕ್ರೇಜ್ ಇದೆ. ಸಿಂಪಲ್ ಕಥೆಯೊಂದಿಗೆ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟ ಸಿನಿಮಾ ಅದಾಗಿತ್ತು. ಈಗ ಅದರ ಎರಡನೇ ಭಾಗ ಮಾಡಿದಾಗಿ ಚಿತ್ರತಂಡದ ಮೇಲೆ ದೊಡ್ಡ ಜವಾಬ್ದಾರಿಯಿರುತ್ತದೆ. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಕೇಳುಗರ ಮನಗೆದ್ದಿವೆ.

ಕೇರಳ ಮೂಲದ ರಚೆಲ್ ಡೇವಿಡ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ರವಿ ಸೀತಾರಾಮ್ ಎಂಬ ಮತ್ತೊಬ್ಬ ಹೊಸ ಹಾಗೂ ಹಿರಿಯ ಕಲಾವಿದರು ಚಿಕ್ಕ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇನ್ನು ಮಿಲನಾ ನಾಗರಾಜ್ ನಿರ್ಮಾಣದ ಜವಾಬ್ದಾರಿಯ ಜೊತೆ ನಾಯಕನ ಫ್ಲ್ಯಾಷ್‌ಬ್ಯಾಕ್ ಕಥೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಮೃತಾ ಅಯ್ಯಂಗಾರ್, ರಚನಾ ಇಂದರ್, ಸುಶ್ಮಿತಾ, ಶ್ವೇತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ಅಭಿಷೇಕ್ ಹಿಂದಿನ ಪಾತ್ರವನ್ನೇ ಮುಂದುವರೆಸಿದ್ದಾರೆ ಎಂಬ ವಿವರಗಳು ಬಂದವು.

ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಅವಕಾಶ ಇದ್ದರೆ ಫೆಬ್ರವರಿ 11ಕ್ಕೆ ಚಿತ್ರಬಿಡುಗಡೆ ಕಾಣುತ್ತದೆ ಎಂಬ ಚಿತ್ರತಂಡದ ಆಶಯಕ್ಕೆ ಸರಿಯಾಗಿ ಸರ್ಕಾರ ಶೇಕಡಾ 50ರ ಮಿತಿಯನ್ನು ತೆಗೆದು ಸಂಪೂರ್ಣ ಭರ್ತಿಗೆ ಅವಕಾಶ ಮಾಡಿ ಕೊಟ್ಟಿದೆ. ಹಾಗಾಗಿ ಅತ್ಯಂತ ಉತ್ಸಾಹದಿಂದಲೇ ಚಿತ್ರ 11ರಂದು ಬಿಡುಗಡೆ ಕಾಣುತ್ತಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *