Snehapriya.com

June 9, 2025

ಮನೆಯೊಳಗಿನ ಹೊಸ ಅನುಭವ ಹೊಸಬರ ಯು ಟರ್ನ್

Social Share :

ಪವನ್ ಕುಮಾರ್ ನಿರ್ದೇಶನದ ಯು ಟರ್ನ್ ಎಂಬ ಚಿತ್ರ ಯಶಸ್ವಿಯಾಗಿತ್ತು ಮಾತ್ರವಲ್ಲ ಉತ್ತಮ ವಿಮರ್ಶೆಗಳನ್ನು ಪಡೆದಿತ್ತು. ಉತ್ತಮ ತಾಂತ್ರಿಕ ಕೌಶಲ್ಯದಿಂದ ಆ ಚಿತ್ರ ಮನೆ ಮಾತು ಆಗಿತ್ತು.

ಈಗ ಯು ಟರ್ನ್ ಚಿತ್ರದ ಪ್ರಸ್ತಾಪ ಏಕೆಂದರೆ ಅದೇ ಹೆಸರಿನ ಇನ್ನೊಂದು ಚಿತ್ರ ಸಿದ್ಧಗೊಂಡಿದೆ. ಅದರ ಹೆಸರು ‘ಯು ಟರ್ನ್ 2’. ಚಂದ್ರು ಓಬಯ್ಯ ಇದನ್ನು ನಿರ್ದೇಶನ ಮಾಡಿದ್ದಾರೆ.

ಮೊದಲ ಚಿತ್ರಕ್ಕೂ ಇದಕ್ಕೂ ಸಂಬಂಧವಿಲ್ಲ; ಇದು ಪಕ್ಕಾ ಹಾರರ್ ಚಿತ್ರ. ಒಂದು ಮನೆಯಲ್ಲಿ ಉಂಟಾದ ಅನುಭವ ಈ ಚಿತ್ರ ಮಾಡಲು ಪ್ರೇರೇಪಿಸಿತು. ಹೊಸಬರಿಂದ ಈ ಚಿತ್ರ ತಯಾರಾಗಿದೆ ಎಂಬುದು ನಿರ್ದೇಶಕ ಚಂದ್ರು ಓಬಯ್ಯ ಕೊಟ್ಟ ವಿವರ.

ನಾನು ಅನೇಕ ಸ್ಟಾರ್ ಗಳ ಮನೆಯ ಬಾಗಿಲು ತಟ್ಟಿದೆ. ಅವರೆಲ್ಲಾ ಮಾನವೀಯತೆ ಇಲ್ಲದವರಂತೆ ನಡೆದುಕೊಂಡರು. ಆದರೆ ಯು ಟರ್ನ್ ಪವನ್ ಮಾತ್ರ ಮೆಚ್ಚುಗೆಯ ರೀತಿಯಿಂದ ನಡೆದುಕೊಂಡು ನಿಮ್ಮ ಚಿತ್ರಕ್ಕೆ ನನ್ನದೇನೂ ಅಭ್ಯಂತರ ಇಲ್ಲ ಎಂದು ಹೇಳಿದರು ಎಂಬ ವಿವರ ಕೊಟ್ಟರು.

ಆನಂದ್ ಸಂಪಂಗಿ ನಿರ್ಮಾಪಕ. ನಟ ಕರಿಸುಬ್ಬು ಮಾತನಾಡುವಾಗ, ನಾನು ಈ ಚಿತ್ರಕ್ಕೆ ಹೊಸ ಟೈಟಲ್ ಇಡಿ ಎಂದು ಹೇಳಿದ್ದೆ. ಆದರೆ ನಿರ್ದೇಶಕರಿಗೆ ಆತ್ಮವಿಶ್ವಾಸ ಹೆಚ್ಚಿಗೆ ಇದೆ. ನನ್ನದು ಇನ್ಸ್ ಪೆಕ್ಟರ್ ಪಾತ್ರ ಗಡ್ಡ ಕೂಡ ಇದೆ ಎಂದು ಹೇಳುತ್ತಾ ಹೋದರು.

ಡಿಂಗ್ರಿ ನಾಗರಾಜ್ ಕೂಡ ನನಗೊಂದು ಒಳ್ಳೆಯ ಪಾತ್ರ ಪಾತ್ರ ಕೊಟ್ಟರು ಎಂದು ಹೇಳಿದರು. ಮಂಜು ಪಾವಗಡ, ನಟಿಯರಾದ ಪೂಜಾ, ಸ್ನೇಹ ಭಟ್, ಉಗ್ರಂ ರವಿ, ಚಿಲ್ಲರ್ ಮಂಜು ಈ ಸಂದರ್ಭದಲ್ಲಿ ಮಾತನಾಡಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *