Snehapriya.com

June 9, 2025

ಹೊಸಬರ ಧರ್ಮಂ ಶೀರ್ಷಿಕೆ ಅನಾವರಣ

Social Share :

ಹೊಸಬರ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಶಾಂತಾ ಸಿನಿಮಾಸ್ ನಡಿ ಎಸ್ ಕೆ ರಾಮಕೃಷ್ಣ ನಿರ್ಮಾಣದ ಈ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ.

ಧರ್ಮಂ ಎಂಬುದು ಚಿತ್ರದ ಹೆಸರು. ಕನ್ನಡದ ಚಿತ್ರರಂಗದ ಸ್ಫೂರ್ತಿಯ ಚಿಲುವೆಗಳಾಗಿರುವ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ಶೀರ್ಷಿಕೆಯನ್ನು ಚಿತ್ರತಂಡ ಅರ್ಪಣೆ ಮಾಡಿದೆ.

ಕಳೆದ ಹದಿಮೂರು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ನಾಗಮುಖ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಸರಿ ಸುಮಾರು 1980ರ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಶಶಿ ಮುಖ್ಯ ಪಾತ್ರದಲ್ಲಿದ್ದು, ವೀರಾನಿಕ ಅವರ ಎದುರು ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸರವಣ ಸಂಗೀತ, ವಿನೋದ್ ಕುಮಾರ್ ಸಂಕಲನ, ನಾಗಶೆಟ್ಟಿ ಕ್ಯಾಮೆರಾ ಉಸ್ತುವಾರಿ ಸಿನಿಮಾದಲ್ಲಿರಲಿದೆ.

ಆನೇಕಲ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಾಡು ಮತ್ತು ಸಾಹಸ ದೃಶ್ಯ ಬಾಕಿ ಇದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ.

ಇನ್ನುಳಿದ ಭಾಗ ಚಿತ್ರೀಕರಣ ಮುಗಿಸಿ ಆದಷ್ಟು ಶೀಘ್ರ ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *