ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಐದಾರು ವರ್ಷಗಳ ಕಾಲ ಪಳಗಿರುವ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ ಸ್ಟಾಕರ್ ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ತೆಲುಗು ಮೂಲದ ರಾಮ್ ಈ ಚಿತ್ರದ ಮುಖ್ಯ ಪಾತ್ರಧಾರಿ..
ರಾಮ್ ಅವರಿಗೆ ಕನ್ನಡದ ಮೇಲಿರುವ ಅಭಿಮಾನ ಅವರನ್ನು ಕನ್ನಡ ಚಿತ್ರರಂಗದತ್ತ ಕರೆ ತಂದಿದೆ.. ಹಾಗಾಗಿ ಸ್ಟಾಕರ್ ಅವರ ಪಾಲಿಗೆ ಒಲಿದು ಬಂದಿದೆ. ಈ ಚಿತ್ರದಲ್ಲಿ ಅರವಿಂದ್ ಹೆಸರಿನ ಪಾತ್ರ ಮಾಡಿರುವ ರಾಮ್ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಹೊರ ಬಂದಿದೆ..
ಬೆಳದಿಂಗಳ ಬಾಲೆ ಸುಮನ್ ನರ್ಗಕರ್, ಐಶ್ವರ್ಯ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಈ ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ತಯಾರಾಗಿದೆ.
ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸಿನಿಮಾವನ್ನು ಎಸ್ ಎಂ ಎಲ್ ಪ್ರೊಡಕ್ಷನ್ಸ್ ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ನಡಿ ಎಂ ಎನ್ ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ.
ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿ ಆರ್ ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸವಿದೆ.
ಸದ್ಯ ಬಿಡುಗಡೆಯ ಹಾದಿಯಲ್ಲಿದೆ ಅದ್ದೂರಿ ಸಿನಿಮಾ ಸ್ಟಾಕರ್..!