Snehapriya.com

March 17, 2026

ರಾಗಿಣಿ ಪೊಲೀಸ್ ಕಂಪ್ಲೆಂಟು ಪ್ರೇಮ ಬಿಡುಗಡೆ ಮಾಡಿದರು..

Social Share :

* ಪ್ರೇಮಾ ಸಾಕ್ಷಿಯಾದ ಪೊಲೀಸ್ ಕಂಪ್ಲೆಂಟ್ ಟೀಸರ್ *

* ಪೊಲೀಸ್ ಕಂಪ್ಲೆಂಟ್ ನಲ್ಲಿ ವರಲಕ್ಷ್ಮೀ-ರಾಗಿಣಿ ಆ್ಯಕ್ಷನ್ *

ಇದು ಇಬ್ಬರು ಜನಪ್ರಿಯ ನಟಿಯರ ಆಕ್ಷನ್ ಥ್ರಿಲ್ಲರ್ ಸ್ಟೋರಿ ಇರುವ ಚಿತ್ರ. ಇದರ ಟೀಸರ್ ಬಿಡುಗಡೆ ಮಾಡಿದ್ದು ಮತ್ತೊಬ್ಬ ಜನಪ್ರಿಯ ನಟಿ ಪ್ರೇಮಾ..

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ವಿರಳವಾಗಿದ್ದು. ಈಗ ಒಂದು ಚಿತ್ರ ಆ ಕೊರತೆ ತುಂಬುತ್ತಿದೆ. ಅದರ ಹೆಸರು ಪೊಲೀಸ್ ಕಂಪ್ಲೆಂಟ್..

ಕನ್ನಡದಲ್ಲಿ ಈ ಹಿಂದೆ ಪೂಜಾಗಾಂಧಿ ಅಭಿನಯದ ‘ಅನು’, ‘ದಂಡು’, ‘ಆಪ್ತ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ ಈ ಚಿತ್ರವನ್ನೂ ಸದ್ದಿಲ್ಲದೆ ನಿರ್ದೇಶನ ಮಾಡಿದ್ದು, ಎ.ಎ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್ ಬ್ಯಾನರಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಇತ್ತೀಚೆಗಷ್ಟೇ ‘ಮಾರ್ಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ನವೀನ್ ಚಂದ್ರ, ಕೃಷ್ಣ ಸಾಯಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಹೀಗೆ ದೊಡ್ಡ ಕಲಾವಿದರ ತಾರಾ ಬಳಗವೇ ಚಿತ್ರದಲ್ಲಿದೆ.

ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿರುವ ಸಂದರ್ಭದಲ್ಲಿ ಚಿತ್ರದ ಟೀಸರ್ ನ್ನು ಖ್ಯಾತ ನಟಿ ಪ್ರೇಮಾ ಬಿಡುಗಡೆಗೊಳಿಸಿದರು. ಚಿತ್ರದ ಮೊದಲ ಹಾಡನ್ನು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಹಾಗೂ ನಿರ್ಮಾಪಕ ರಾಜಣ್ಣ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕ ಸಂಜೀವ್ ಮೆಗೋಟಿ, ಸುಮಾರು ಹತ್ತು ವರ್ಷದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್ ಕಂ ಹಾರರ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಮಾಡಿದ ಕರ್ಮ ಹೇಗೆ ಅವರವರನ್ನು ಕಾಡುತ್ತದೆ ಎಂಬ ಒಂದು ಎಳೆ ಈ ಸಿನಿಮಾವಾಗಿದೆ ಎಂದರು.

ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಬಿಡುಗಡೆಗೊಳಿಸುವ ಯೋಜನೆಯಿದೆ ಎಂದರು ನಿರ್ದೇಶಕ ಸಂಜೀವ್ ಮೆಗೋಟಿ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ಇದೊಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಕೂಡ ಸಿನಿಮಾದಲ್ಲಿದೆ ಎಂದರು.

ಚಿತ್ರದ ಮೊದಲ ಗೀತೆಗೆ ಎಫ್.ಎಂ.ರೈನ್ ಬೋ ಆರ್.ಜೆ. ಸುಧೀಂದ್ರ (ಆರೋಹಣ ಖ್ಯಾತಿ) ಸಂಗೀತ ಸಂಯೋಜಿಸಿದ್ದು, ಬಿ. ಆರ್. ಛಾಯಾ ಈ ಗೀತೆಗೆ ಧ್ವನಿಯಾಗಿದ್ದಾರೆ. ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣ ಚಿತ್ರಕ್ಕಿದೆ.

Social Share :

Leave a Comment

Your email address will not be published. Required fields are marked *