
* ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರವಾಸೋದ್ಯಮ ಸಮಾವೇಶ IIFTC ಪ್ರಶಸ್ತಿ *
* ಚಲವಾದಿ ಕುಮಾರ್ ನಿರ್ಮಾಣ, ನಾಗ್ ಶೇಖರ್ ನಿರ್ದೇಶನ *
ರೇಷ್ಮೆ ಬೆಳೆಗಾರರ ಸಂಕಷ್ಟ ಅಭಿವ್ಯಕ್ತಿ ಸಿದ ಚಿತ್ರವಾಗಿ ಗಮನ ಸೆಳೆದಿದ್ದ ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ-2’ ಚಿತ್ರಕ್ಕೆ ಈ ವರ್ಷದ IIFTC ಟೂರಿಸಂ ಇಂಪ್ಯಾಕ್ಟ್ ಪ್ರಶಸ್ತಿ ಲಭಿಸಿದೆ.

ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು,
ಇತ್ತೀಚೆಗೆ ಮುಂಬೈನ ವೆಸ್ಟರ್ನ್ ಗಾರ್ಡನ್ ಸಿಟಿ ಹೋಟೆಲ್ ನಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ಮಾಪಕ ಚಲವಾದಿ ಕುಮಾರ್ ಹಾಗೂ ನಾಗ್‌ಶೇಖರ್ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು.
ವಿವಿಧ ದೇಶಗಳ ನಿರ್ಮಾಪಕರು ಮತ್ತು ಇತರ ಗಣ್ಯರುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ‘ಸಂಜು ವೆಡ್ಸ್ ಗೀತಾ-2’ ಚಿತ್ರದಲ್ಲಿ ಸ್ವಿಟ್ಜರ್ಲೆಂಡ್ ನ್ನು ಕ್ಲಾಸಿಕ್ ಮಾದರಿಯಲ್ಲಿ ಚಿತ್ರಿಸಿರುವುದು ಗಮನ ಸೆಳೆದಿರುವ ವಿಷಯವಾಗಿದೆ.

ಚಿತ್ರದಲ್ಲಿ ಬಳಸಿದ ಅದ್ಭುತ ಚಿತ್ರೀಕರಣ ಸ್ಥಳಗಳು ಈ ಗೌರವಕ್ಕೆ ಕಾರಣವಾಗಿವೆ. 2017ರಲ್ಲಿ IIFTC ಈ ಪ್ರಶಸ್ತಿಯನ್ನು ಆರಂಭಿಸಿದ್ದು 8ನೇ ವರ್ಷದ ಸಮಾರಂಭ ಇದಾಗಿದೆ.
