ಮಹಿಳೆಯರ ಹಿರಿಯರ ವಿಭಾಗದೊಂದಿಗೆ ಕ್ರೀಡಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನ ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊಮ್ಮಿದೆ..
ಈಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಫೆಡರೇಷನ್ ಕಪ್ ಪಂದ್ಯವಳಿಯ ಹಗ್ಗ ಜಗ್ಗಾಟ ವಿಭಾಗದಲ್ಲಿ ರಾಜ್ಯ ಪೊಲೀಸ್ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದು ಈ ಸಾಧನೆ ಮಾಡಿದೆ.
ಭಾರತೀಯ ಯೂತ್ ಅಂಡ್ ಸ್ಫೋಟ್ಸ್ ಫೆಡರೇಷನ್ ವತಿಯಿಂದ ಕಳೆದ ಅಕ್ಟೋಬರ್ 13ರಿಂದ 16ರವರೆಗೆ ಗೋವಾದ ಕಲಾಂಗುಟೆಯಲ್ಲಿ ನಡೆದ ರಾಷ್ಟ್ರೀಯ ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ರಾಜ್ಯ ಮಹಿಳಾ ಪೊಲೀಸ್ ತಂಡ ಈ ಸಾಧನೆ ಮಾಡಿದೆ.
ತಂಡದಲ್ಲಿ ವ್ಯವಸ್ಥಾಪಕ ಮಹಮದ್ ರಫಿ ಸೇರಿದಂತೆ ಸಂಯೋಜಕಿ ಮೇರಿ ಶೈಲಜಾ, ನಾಯಕಿ ಶೋಭಾ ಸಿ ಒಳಗೊಂಡಂತೆ ರೇಖಾ ಎನ್, ಶಾಂತಕುಮಾರಿ, ಹೇಮಾವತಿ, ಸೌಮ್ಯಲತಾ, ರಾಣಿ ಎಸ್, ದೀಪಿಕಾ ಹಾಗೂ ಯಶೋದಮ್ಮ ಇದ್ದರು.
ಪೊಲೀಸ್ ಮಹಾ ನಿರ್ದೇಶಕ (ಸಿಐಡಿ)ಪಿ.ಎಸ್.ಸಂಧು, ಎಡಿಜಿಪಿ ಶರತ್ ಚಂದ್ರ ಹಾಗೂ ಉಮೇಶ್ ಕುಮಾರ್, ಡಿಐಜಿ ರಮೇಶ್ ಬಾನೋತ್, ಎಸ್ ಪಿ ಸಾರಾ ಫಾತಿಮಾ ಹಾಗೂ ಹಿರಿಯ ಅಧಿಕಾರಿಗಳು ಮಹಿಳಾ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.