Snehapriya.com

March 13, 2026

ಲವ್ ಮಾಕ್ಟೇಲ್ ಗೆ ಉತ್ತಮ ಕಾಲ ಪ್ರಿಮಿಯರ್ ಬುಕ್ಕಿಂಗ್ ಫುಲ್ ಫುಲ್

Social Share :

ನಟ ಡಾರ್ಲಿಂಗ್ ಕೃಷ್ಣ ನೆಚ್ಚಿನ ‘ಲವ್ ಮಾಕ್ಟೇಲ್..’ ಸರಣಿಯ ಮೂರನೇ ಚಿತ್ರ ಯುಗಾದಿ ಹಬ್ಬ(ಮಾರ್ಚ್-19)ದಂದು ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಿಮಿಯರ್ ಶೋ ಬುಕ್ಕಿಂಗ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ ‘ಲವ್ ಮಾಕ್ಟೇಲ್-3’ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದ್ದು, ಈ ಕಥಾ ಸರಣಿಯ ಮೂರು ಅಂಶಗಳನ್ನು ಅದರಲ್ಲಿ ತೋರಿಸಲಾಗಿದೆ. ಆದರೆ ಕಥೆಯನ್ನು ಬಿಟ್ಟುಕೊಡದ ಆಶಯದಲ್ಲಿ ಮೂರನೇ ಭಾಗದ ಬಗ್ಗೆ ಹೆಚ್ಚಿನ ಬೆಳಕು ಟ್ರೈಲರ್ ಮೇಲೆ ಬೀಳಿಸಲಾಗಿಲ್ಲ.

ಈಚೆಗೆ ಮೂರನೇ ಆವೃತ್ತಿಯ ಈ ಟ್ರೈಲರ್ ನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪುತ್ರಿ ಪರಿ ಬಿಡುಗಡೆಗೊಳಿಸಿದರು. ನಿರ್ದೇಶಕ ಹಾಗೂ ಈ ಚಿತ್ರಕ್ಕೊಂದು ಹಾಡನ್ನು ಬರೆದಿರುವ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಚಿತ್ರದ ಆಶಯಗಳು ಮತ್ತು ಅದು ರೂಪುಗೊಂಡ ಬಗೆ ಹೇಗೆ ಎಂಬುದರ ವಿವರಣೆ ನೀಡಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್, ಈ ಚಿತ್ರದ ಬಿಡುಗಡೆಗೆ ದೊಡ್ಡ ಚಿತ್ರದ ಸಮಯ ಪೂರಕವಾಗಿ ಕೂಡಿ ಬಂದಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ, ನಯಾರಾ ಮೊದಲಾದವರ ಹಾಜರಾತಿ ಇತ್ತು.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಮಾಡಿದ್ದಾರೆ.

Social Share :

Leave a Comment

Your email address will not be published. Required fields are marked *