
ಬೆಂಗಳೂರಿನ ಸಹಕಾರ ನಗರದಲ್ಲಿ ಅತ್ಯಂತ ವಿಶಿಷ್ಟ ರೆಸ್ಟೋರೆಂಟ್ ಒಂದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತದೆ. ಆಗ ಅಲ್ಲಿಗೆ ಭೇಟಿ ಕೊಡುವ ರಸಿಕ ಮನಸ್ಸುಗಳಿಗೆ
ಅಹ್ಲಾದ ಮೈದುಂಬುತ್ತದೆ ಜೊತೆ ಬಾಯಿ ಚಪ್ಪರಿಸುವ ಆಹಾರ ಸೇವನೆಗೆ ಮೈ ಮನಸ್ಸು ತೃಪ್ತಿಕರ ಭಾವಗಳನ್ನು ಅನುಭವಿಸುತ್ತದೆ..

ಅದೇ ಕೆಜಿಎಫ್ ರೆಸ್ಟೋರೆಂಟ್..!
ಕೆಜಿಎಫ್ ಅಂದರೆ ‘ಕನ್ನಡಿಗಾಸ್ ಗೋಲ್ಡನ್ ಫುಡ್’ ಎಂದು ಕರೆಯಲಾಗಿದೆ. ಹೊರಗಡೆ ‘ಫುಡ್ ಮೈನಿಂಗ್ ಕಾರ್ಪೊರೇಷನ್’ ಎಂಬ ಬರಹವೂ ಕಾಣಿಸುತ್ತದೆ..

ಆದರೆ ನೀವು ಒಮ್ಮೆ ಒಳಗಡೆ ಕಾಲಿಟ್ಟರೆ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರವೇ ಗೋಚರವಾಗುತ್ತದೆ.. ಹೌದು ಕನ್ನಡಿಗಾಸ್ ಗೋಲ್ಡನ್ ಫುಡ್ ರೆಸ್ಟೋರೆಂಟ್ ನ ಆಶಯಗಳು ಇಡೀ ಕೆ.ಜಿ.ಎಫ್ ಚಿತ್ರದ ಕಲಾವಂತಿಯೇ ಎದ್ದು ಕಾಣುವಂತಿವೆ.

ಕೆ.ಜಿ.ಎಫ್ ಚಿತ್ರದಲ್ಲಿ ಬರುವ ಕಲ್ಲಿದ್ದಲಿನಿಂದ ಹಿಡಿದು ಹೆಲಿಕಾಪ್ಟರ್ ವರೆಗೆ ಎಲ್ಲವೂ ಕಾಣ ಸಿಗುತ್ತವೆ. ಅವುಗಳನ್ನು ನೋಡುತ್ತಾ ಸ್ವಾದಿಷ್ಟ ತಿನಿಸುಗಳನ್ನು ಮೆಲ್ಲುತ್ತಾ ಹೊಸ ಲೋಕವನ್ನು ಮೈದುಂಬಿಕೊಂಡು ಹೊರ ಬರಬಹುದು..

ಅಲ್ಲಿ ಮುಖ್ಯವಾಗಿ ಚಿನ್ನದ ಗಟ್ಟಿಗಳು.. ಚಿತ್ರದಲ್ಲಿ ಬಳಸಲಾದ ಶಸ್ತ್ರಗಳ ವಿನ್ಯಾಸಗಳು ಗಮನ ಸೆಳೆಯುತ್ತವೆ. ಇನ್ನು ಸಂತೋಷ ಕೂಟದ ವಿಷಯಕ್ಕೆ ಬಂದರೆ ಹಿಂದೆ ಮುಂದೆ ಅಕ್ಕಾ ಪಕ್ಕಾ ಕಲಾ ವಿನ್ಯಾಸಗಳನ್ನು ನೋಡುತ್ತಲೇ ಪಾರ್ಟಿ ಮಜಾ ಅನುಭವಿಸುವಷ್ಟು ಸುಂದರ ತಾಣವಾಗಿದೆ.

ಸ್ಫೂರ್ತಿಯನ್ನು ಮೈದುಂಬಿಕೊಂಡು ಓಡಾಡುವ ಯುವಕ ಶ್ರೀನಿವಾಸ್ ಮುರಳಿ ಅವರ ಕಲ್ಪನೆಯ ಕೂಸು ಇದು. ಎರಡು ರೀತಿಯ ಆಹಾರವೂ ಲಭ್ಯ. ಜೊತೆಗೆ ನಾಟಿ, ಚೈನೀಸ್, ಉತ್ತರ ಮತ್ತು ಭಾರತ ಮಾದರಿ ಆಹಾರ. ಹಾಗೆಯೇ ಇಂಟಾಲಿನ್, ಕೂಲರ್ಸ್, ಮಾಕ್ ಟೈಲ್ ಪದ್ಧತಿಯ ವ್ಯವಸ್ಥೆ ಇಲ್ಲಿ ಸಿಗುತ್ತದೆ..

ಇಲ್ಲಿನ ಆಸನ ವ್ಯವಸ್ಥೆಯೂ ಅದ್ಭುತ. ಪ್ರೇಮಿಗಳಿಗೆ ಖಾಸಗಿ ತಾಣದಂತೆ..
ಅಮ್ಮಂದಿರಿಗೆ ರುಚಿಯ ಸ್ವಾದದಂತೆ ನೈರ್ಮಲ್ಯ ಆಹಾರ ಸವಿಯುವ ಅವಕಾಶ. ಕೆ.ಜಿ.ಎಫ್ ಕೇವಲ ಹೆಸರಲ್ಲ; ಅದೊಂದು ಅದ್ಭುತ ಭಾವನೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಅಸಂಖ್ಯಾತ ಹೊಟೇಲ್ ಗಳಿವೆ. ಆದರೆ ಕಲಾ ಮೆರುಗು ತುಂಬಿಕೊಂಡು ರುಚಿಯ ಆಸ್ವಾದದ ಜೊತೆ ಥ್ರಿಲ್ಲಿಂಗ್ ಅನುಭವ ನೀಡುವ ಅಪರೂಪದ ತಾಣ ಈ ಕನ್ನಡಿಗಾಸ್ ಗೋಲ್ಡನ್ ಫುಡ್..

ಒಮ್ಮೆ ಭೇಟಿ ಕೊಡಬಹುದು..
ಸ್ಥಳ: ನಂ.15-16, 5ನೇ ಮುಖ್ಯರಸ್ತೆ, ಶಾಂತಿವನ, ಸಹಕಾರ ನಗರ, ಸ್ಟೆರ್ಲಿಂಗ್ ಹೈಟ್ಸ್ ಅಪಾರ್ಟ್ಮೆಂಟ್ ಪಕ್ಕ. ಬೆಂಗಳೂರು-92
ಸಂಪರ್ಕ : 8495880088, 8496880088
ಶ್ರೀನಿವಾಸ್ ಮುರುಳಿ..
