Snehapriya.com

April 17, 2025

admin

ಸುಮಂತ್ ಶೈಲೇಂದ್ರ ನಟನೆಯ ಚೇಸರ್ ಚಿತ್ರೀಕರಣ ಮುಕ್ತಾಯ

Social Share :

ಸುಮಂತ್ ಶೈಲೇಂದ್ರ ಅಭಿನಯದ ಎಂ.ಜಯರಾಮ್ ನಿರ್ದೇಶನದ ‘ಚೇಸರ್’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆ ಕಾಣಲಿದೆ.

ಮಾಲತಿ ಶೇಖರ್ ಶಿವಮೊಗ್ಗ ನಿರ್ಮಾಣದ, ಉಪೇಂದ್ರ ಅಭಿನಯದ ‘ಬುದ್ದಿವಂತ ೨’ ಚಿತ್ರದ ಖ್ಯಾತಿಯ ಎಂ ಜಯರಾಮ್ ನಿರ್ದೇಶನದ ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಅಭಿನಯಿಸಿರುವುದು ವಿಶೇಷವಾಗಿದೆ.

ಲವ್ ಜಾನರ್ ಜೊತೆಗೆ ಸಸ್ಪೆನ್ಸ್ ವಿತ್ ಆಕ್ಷನ್ ಕಥಾ ಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಎಂ.ಜಯರಾಮ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ಸುಮಂತ್ ಶೈಲೇಂದ್ರ ಜೊತೆ ರಕ್ಷ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Social Share :

ಸಂಜೀವ್ ಮೆಗೋಟಿ ಚಿತ್ರಕ್ಕೆ ಸುಧೀಂದ್ರ ಸಂಗೀತ ನಿರ್ದೇಶಕ

Social Share :


ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಸಂಜೀವ ಮೇಗೋಟಿ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಎಫ್.ಎಂ.ರೈನ್ ಬೋ (ಆರ್.ಜೆ) ಖ್ಯಾತಿಯಆರೋಹಣ ಸುಧೀಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

‘ಆದಿ ಪರ್ವ’ ಚಿತ್ರದ ಗೆಲುವಿನ ನಂತರ ನಿರ್ದೇಶಕ ಸಂಜೀವ್ ಮೇಗೋಟಿ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ವರಲಕ್ಷ್ಮಿ ಶರತ್ ಕುಮಾರ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಮೂರು ಭಾಷೆಗಳಲ್ಲಿ ನಿರ್ಮಾಣವಾಗುವ ಈ ಚಿತ್ರದಲ್ಲಿ ತುಪ್ಪದ ಹುಡುಗಿ ರಾಗಿಣಿ ಕೂಡ ಅಭಿನಯಿಸುತ್ತಿರುವುದು ವಿಶೇಷ.

ಚಿತ್ರಕ್ಕೆ ಆರೋಹಣ ಸುಧೀಂದ್ರ ಸಂಗೀತ ನೀಡುತ್ತಿದ್ದು, ಮೂರು ಹಾಡುಗಳ ರಾಗ ಸಂಯೋಜನೆ ಹಾಗೂ ಸಾಹಿತ್ಯ ಇವರದಾಗಿದೆ.

ಖ್ಯಾತ ಹಿನ್ನೆಲೆ ಗಾಯಿಕಿ ಬಿ ಆರ್ ಛಾಯಾ ಒಂದು ಹಾಡಿಗೆ ದನಿಯಾಗಿದ್ದಾರೆ. ದೊಡ್ಡ ಬಜೆಟ್ ನ ಈ ಚಿತ್ರಕ್ಕೆ ಇನ್ನು ಹೆಸರಿಡಲಾಗಿಲ್ಲ. ಇದೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂಬುದು ಚಿತ್ರತಂಡದ ಮಾಹಿತಿ.

Social Share :

ಅನ್ ಲಾಕ್ ರಾಘವ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಮಂಜುನಾಥ್ ದಾಸೇಗೌಡ, ಗಿರೀಶ್ ಕುಮಾರ್

ನಿರ್ದೇಶನ : ದೀಪಕ್ ಮಧುವನಹಳ್ಳಿ

ನಿಧಿಯ ಶೋಧನೆ ನಗೆಯ ಭಾವನೆ..

ಭಾವನೆಗಳ ಬೆನ್ನತ್ತಿ ಬೀಗ ತೆಗೆಯುವ ಮಹಾಶೂರ ರಾಘವನ ಪ್ರೇಮ ವೃತ್ತಾಂತದ ಜೊತೆಗೆ ನಿಧಿಯ ಶೋಧನೆ ಮತ್ತು ನಗೆಯ ಭಾವನೆಗೆ ಇಡೀಯ ಕಥೆ ಮೀಸಲು..

ಬಾಲ್ಯದಲ್ಲಿ ಶಾಲೆಯಲ್ಲಿ ಕೂಡಿ ಹಾಕಲ್ಪಟ್ಟಿದ್ದ ಹುಡುಗಿಯನ್ನು ಭಾವನೆಯ ಕಿಡಿ ಹಚ್ಚಿ ಬೀಗ ತೆಗೆದು ಕಾಪಾಡಿದ್ದ ರಾಘವನ ಅಲ್ಲಿ ಮೊಳೆತ ಪ್ರೇಮ ಎಲ್ಲಿಗೆ ಹೋದರೂ ಬಿಡದೆ ಕಾಡುತ್ತದೆ.

ಎಂತಹ ಬೀಗವನ್ನಾದರೂ ತೆಗೆದು ಬೀಗುವ ಅವನಿಗೆ ಶೋಧನೆಯ ಮೂಲಕ ತೆಗೆದ ನಿಧಿ ಪೆಟ್ಟಿಗೆ ತೆಗೆಯುವ ಸವಾಲು. ಆದರೆ ಅದು ದೊರೆಯುವ ಮಾರ್ಗದಲ್ಲಿ ಸಮಸ್ಯೆಗಳು ಸಾಲು ಸಾಲು..

ಇಲ್ಲಿ ಪ್ರಾಚ್ಯವಸ್ತು ಶೋಧನೆ ಮತ್ತು ಸಂಶೋಧನಾ ವಿಷಯವನ್ನು ತಮಾಷೆಯಾಗಿ ಬಳಸಿಕೊಂಡಿರುವುದರಿಂದ ಯಾವುದಕ್ಕೂ ತರ್ಕ ಅನ್ವಯಿಸುವುದಿಲ್ಲ. ಹಾಗೆಯೇ ಅದು ಭೋಧನೆಯ ವಿಷಯವೂ ಅಲ್ಲ.

ಆದರೆ ರಾಘವ ಮತ್ತು ಆತನ ಮಾವ ಹರಿಶ್ಚಂದ್ರ ಮಾಡುವ ಚಿತ್ರ ವಿಚಿತ್ರ ಅವತಾರಗಳು ನಗೆಯ ವಿಷಯಗಳಾಗಿ ಚಿತ್ರದ ಉದ್ದಕ್ಕೂ ಚೆಲ್ಲಾಡುತ್ತವೆ. ಆರು ಅಡಿಯ ರಾಘವ ದುಷ್ಕರ್ಮಿಗಳನ್ನು ಹೊಡೆದು ಚಚ್ಚುವುದು ಸಾಹಸ ಪ್ರಿಯರಿಗೆ ಹಬ್ಬವಾಗಿ ಕಾಣುತ್ತದೆ.

‘ರಾಮ ರಾಮಾ ರೇ’ ಮೂಲಕ ಗಮನ ಸೆಳೆದ ಸತ್ಯ ಪ್ರಕಾಶ್ ಅದೇ ಮಾದರಿಯ ಬ್ರೆನ್ ಲಾಸ್ ಕಾಮಿಡಿಯ ಜಾನರ್ ತೆರೆದು ಕಥೆ ಕಟ್ಟಿದ್ದಾರೆ. ಆದರೆ ನಿರ್ದೇಶಕರು ಚಿತ್ರಕಥೆ ಬಿಗಿಗೊಳಿಸುವ ಹಾದಿಯಲ್ಲಿ ಎಡವಿದಂತೆ ಕಾಣುತ್ತದೆ.

ರಾಘವನ ಪಾತ್ರದಲ್ಲಿ ಮಿಲಿಂದ್ ಗೌತಮ್ ಹೊಡೆದಾಟ ಮತ್ತು ನೃತ್ಯದಲ್ಲಿ ಗಮನ ಸೆಳೆಯುತ್ತಾರೆ. ರಚೆಲ್ ಡೇವಿಡ್ ಗ್ಲಾಮರ್ ಬೊಂಬೆಯಂತೆ ಕಾಣುತ್ತಾರೆ. ಇನ್ನು ಹರಿಶ್ಚಂದ್ರ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿರುವ ಸಾಧು ಚಿತ್ರ ವಿಚಿತ್ರ ಹಾವ ಭಾವಗಳಿಂದ ನಗೆ ಉಕ್ಕಿಸುತ್ತಾರೆ.

ಅಪರೂಪಕ್ಕೆ ಪೀಟರ್ ಪಾತ್ರದಲ್ಲಿ ಶೋಭರಾಜ್ ಅವರಿಗೆ ಕಾಮಿಡಿ ವಿಲನ್ ಆಗಿ ಮಿಂಚುವ ಅವಕಾಶ ದೊರೆತಿದೆ. ಅದನ್ನು ಅವರು ಸದುಪಯೋಗ ಪಡಿಸಿ ಕೊಂಡಿದ್ದಾರೆ.

ರಾಮಣ್ಣನಾಗಿ ರಮೇಶ್ ಭಟ್,
ಪೀಟರ್ ಪತ್ನಿ ಮಾಯಾ ಪಾತ್ರದಲ್ಲಿ ವೀಣಾ ಸುಂದರ್, ನಿಧಿಗಾಗಿ ಹೊಂಚು ಹಾಕುವ ವ್ಯಕ್ತಿಯ ಪಾತ್ರದಲ್ಲಿ ಸುಂದರ್, ಅಧಿಕಾರಿ ಜಗಪತಿ ಪಾತ್ರದಲ್ಲಿ ಅವಿನಾಶ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಅಲ್ಲದೆ ಧರ್ಮಣ್ಣ ಹಾಗೂ ಮೂಗ್ ಸುರೇಶ್ ಪಾತ್ರಗಳು ವಿಶೇಷವಾಗಿ ನಗು ತರಿಸುತ್ತವೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕ.

Social Share :

ಮಿಸ್ಟರ್ ರಾಣಿ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಸಮೂಹ ಹೂಡಿಕೆ

ನಿರ್ದೇಶನ : ಮಧುಚಂದ್ರ

ಅವಳದಲ್ಲ ಅವನ ಕಥೆ..

ಕೆಲವೊಮ್ಮೆ ಮಾರು‌ವೇಷದಿಂದ ಅದ್ಭುತ ಪವಾಡಗಳು ಸಂಭವಿಸುತ್ತವೆ. ಇಲ್ಲಿಯೂ ಹಾಗೆ ಅವನು ಹಾಕುವ ಅವಳ ವೇಷ ಗಂಡಸರಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತದೆ.

ಮಂಡ್ಯ ಭಾಷೆ ಮಾತನಾಡುವ ರಾಜ ಎಂಬ ಮುದ್ದಾದ ಯುವಕ ಮಂಜನ ಸಹವಾಸದಿಂದ ಹೆಣ್ಣು ವೇಷ ಹಾಕಿ ಮಾಡುವ ಸರ್ಕಸ್ ಇಲ್ಲಿ ಗಟ್ಟಿಯಾದ ಮನರಂಜನೆ ಒದಗಿಸುತ್ತದೆ.

ಪೊಲೀಸ್ ಆಗಿರುವ ಅಪ್ಪನ ಕಾಠಿಣ್ಯ ನಿಲುವಿಗೆ ಹೆದರಿ ಬದುಕುತ್ತಿದ್ದ ರಾಜ ಓದಿದ್ದು ಎಂಜಿನಿಯರಿಂಗ್ ಆದರೂ ಅವನ ಒಲವು ಒಣ್ಣದ ಬದುಕಿನ ಕಡೆಗೆ..

ಅಮೆರಿಕಾದಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರಿಂದ ಮರೆಯಾಗುವ ರಾಜನಿಗೆ ಹೆಣ್ಣು ವೇಷ ಹಾಕುವ ಅವಕಾಶ. ಬಳಿಕ ಚಿತ್ರದಲ್ಲಿ ನಟಿಸಲು ಅವಕಾಶ. ಮುಂದೆ ದೊಡ್ಡ ನಟಿಯಾಗಿ ಹೊಮ್ಮಿದಾಗ ಸುತ್ತಲೂ ಆವರಿಸುವ ಆಹ್ಲಾದಕರ ಸನ್ನಿವೇಶಗಳೇ ಕಥಾ ವಸ್ತು.

ರಾಣಿಯನ್ನು ಪ್ರೇಮಿಸುವ ನಿರ್ದೇಶಕ. ಹೆಣ್ಣು ವೇಷದಲ್ಲಿದ್ದೇ ನಟಿ ದೀಪಿಕಾ ಳನ್ನು ಪ್ರೇಮಿಸುವ ರಾಜ; ರಾಣಿಗೆ ಎದುರಾಗಿ ಮತ್ತೊಬ್ಬ ಹೀರೋ ಆತ ರಾಜನೇ ಆಗಿರುವುದು ಹೀಗೆ ಒಂದಕ್ಕೊಂದು ಬೆಸುಗೆ ಬಿಡಿಸುವಾಗಲೇ ಮೈದಳೆಯುವ ಅಮೋಘ ರಾಜನ ಕಥೆ.

ಹೀಗೆ ಮನರಂಜನೆಯ ಮಹಾಪೂರದಲ್ಲಿ ಪ್ರೇಕ್ಷಕ ಕೊಚ್ಚಿ ಹೋಗದಿದ್ದರೆ ಅದು ಅವನ ತಪ್ಪು. ರಾಜ ಮತ್ತು ರಾಣಿಯ ಪಾತ್ರವನ್ನು ನಿರ್ವಹಿಸಿರುವ ದೀಪಕ್ ಸುಬ್ರಹ್ಮಣ್ಯ ‌ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ನಟಿ ಪಾರ್ವತಿ ನಾಯರ್ ಹಾಗೂ ಉಳಿದ ಪಾತ್ರಗಳು ಕಾಮಿಡಿ ವಸ್ತುವಿಗೆ ಪೂರಕವಾಗಿವೆ.

ಚಿತ್ರದೊಳಗೊಬ್ಬ ನಿರ್ದೇಶಕನ ಪಾತ್ರದಲ್ಲಿ ನಿರ್ದೇಶಕ ಮಧುಚಂದ್ರ ಪಾತ್ರವೂ ಗಮನಾರ್ಹ. ಸಂಪೂರ್ಣ ನಗೆಯ ಚಿತ್ರವಾಗಿ ಮಿಸ್ಟರ್ ರಾಣಿ ನಿಲ್ಲುತ್ತದೆ.

ಒಮ್ಮೆ ನಕ್ಕು ಹೊರಬರಲು ರಾಣಿಯನ್ನು ನೋಡಲು ಪ್ರೇಕ್ಷಕ ಖಂಡಿತಾ ಮನಸ್ಸು ಮಾಡಬಹುದು.

Social Share :

ಸರ್ಕಾರಿ ನ್ಯಾಯ ಬೆಲೆ ಅಂಗಡಿ ಗ್ಲಾಮರ್ ಬೆಡಗಿ ರಾಗಿಣಿ ಚಿತ್ರ..

Social Share :


ಬಿಪಿಎಲ್ ಕಾರ್ಡ್ ಮಹತ್ವ ಪಡೆದುಕೊಂಡಿರುವ ಈ ದಿನಗಳಲ್ಲಿ ಸರ್ಕಾರಿ ಸವಲತ್ತು ಪಡೆಯುವ ಹಂಬಲವೂ ಹೆಚ್ಚಾಗಿದೆ. ಆದರೆ ಯಾವುದೂ ಸುಲಭವಲ್ಲ ಮತ್ತು ಯಾವುದೂ ನ್ಯಾಯವೂ ಅಲ್ಲ..

ಹಾಗಾಗಿ ಜನರ ಸಂಕಷ್ಟವನ್ನು ಬಿಂಬಿಸುವ ಚಿತ್ರವೊಂದು ಈಗ ತಯಾರಾಗುವ ಹಾದಿಯಲ್ಲಿದ್ದು, ಅದೇ ಕಾರಣಕ್ಕೆ ಗಮನ ಸೆಳೆದಿದೆ.

ಅಂದ ಹಾಗೆ ಚಿತ್ರದ ಹೆಸರು ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’..! ಅಚ್ಚರಿ ಎಂದರೆ ಈ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಗ್ಲಾಮರ್ ಬೆಡಗಿ ರಾಗಿಣಿ ದ್ವಿವೇದಿ.

ಗ್ರಾಮೀಣ ಭಾಗದ ಕಷ್ಟ ನಷ್ಟಗಳ ಜೊತೆಗೆ ಹೊಟ್ಟೆ ಪಾಡಿನ ವಿಷಯವೂ ಈ ಚಿತ್ರದ ಮೂಲಕ ಅನಾವರಣಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ರಾಗಿಣಿ ಗ್ರಾಮೀಣ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಾಗಾಗಿ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್‌ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದೆ.

ಇದೀಗ ಚಿತ್ರತಂಡ, ಹಾಡುಗಳ ಧ್ವನಿಮುದ್ರಣ ಆರಂಭಿಸುವ ಮೂಲಕ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಿದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ, ಸಂಗೀತ ನಿರ್ದೇಶಕ ಅನಂತ್‌ ಆರ್ಯನ್‌ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳ ಮುದ್ರಣ ಕಾರ್ಯವನ್ನು ಅರಂಭಿಸಲಾಗಿದೆ.

ಈ ವೇಳೆ ರಾಗಿಣಿ ದ್ವಿವೇದಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ, ನಟಿ ಗೀತಪ್ರಿಯ, ನಿರ್ಮಾಪಕಿಯರಾದ ತೇಜು ಮೂರ್ತಿ, ಎಸ್‌. ಪದ್ಮಾವತಿ ಚಂದ್ರಶೇಖರ್‌, ಹಿರಿಯ ನಿರ್ಮಾಪಕರಾದ ಭಾ. ಮ. ಹರೀಶ್‌, ಭಾ. ಮ. ಗಿರೀಶ್‌, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ, ಚಿತ್ರದ ನಿರ್ದೇಶಕ ಸಾತ್ವಿಕ್‌ ಪವನ್‌ ಕುಮಾರ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಇಲ್ಲಿಯವರೆಗೂ ಮಾಡಿರದ ವಿಭಿನ್ನ ಪಾತ್ರ ನನ್ನದು ಎಂದರು ರಾಗಿಣಿ.
‘ಜಯಶಂಕರ ಟಾಕೀಸ್‌ʼ ಬ್ಯಾನರಿನಡಿ ಚಿತ್ರವನ್ನು ತೇಜು ಮೂರ್ತಿ ಮತ್ತು ಎಸ್‌. ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ʼತಾಯವ್ವʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ್‌ ಪವನ ಕುಮಾರ್‌ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದೇ ಮಾರ್ಚ್‌ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸುವ ಕುರಿತು ಮಾಹಿತಿಗಳನ್ನು ನೀಡಿತು ಚಿತ್ರತಂಡ.

Social Share :

ಬೇಗೂರು ಕಾಲೋನಿ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಎಂ.ಶ್ರೀನಿವಾಸ್ ಬಾಬು

ನಿರ್ದೇಶನ : ಪ್ಲೇಯಿಂಗ್ ಕಿಂಗ್ ಮಂಜು

ರಾಜಕೀಯದ ಬೆಂಕಿಯಲ್ಲಿ
ನಲುಗುವ ದಮನಿತರ ಕಥೆ..

ನಿಜವಾಗಿ ಇದು ದಮನಿತರ ಕಥೆ. ಚಿಕ್ಕ ಪುಟ್ಟ ಕೋರಿಕೆಗಳಿಗೆ ರಾಜಕಾರಣಿಗಳ ಕೈಗೆ ಸಿಕ್ಕು ನರಳುವ ಅಮಾಯಕ ಯುವಕರ ಕಥೆಯ ನೈಜ ಅಭಿವ್ಯಕ್ತಿ.

ಅದು ಬಡವರ ಕಾಲೋನಿ..!
ಜಾತಿ ಭೇದ ಇವುಗಳ ಹಂಗಿಲ್ಲ. ಪ್ರೀತಿ ಸ್ನೇಹ ಇವುಗಳಿಗೆ ಕೊರತೆಯೇ ಇಲ್ಲ. ಅದೇ ರೀತಿ ತ್ಯಾಗ ಮನೋಭಾವ ರಕ್ತಗತ ಎಂಬಷ್ಟು ಸಲೀಸು. ಇಂತಹ ಕಾಲೋನಿಯಲ್ಲಿ ಜೀವಕ್ಕೆ ಜೀವ ಕೊಡುವ ಇಬ್ಬರು ಗೆಳೆಯರು.

ರಾಘವ ಮತ್ತು ಶಿವ ಸ್ನೇಹಕ್ಕೂ ಸೈ ತ್ಯಾಗಕ್ಕೂ ಸೈ. ರಾಘವ ಗಂಭೀರ. ಯಾವುದೇ ಕೆಲಸವನ್ನು ವಿವೇಚನೆಯಿಂದ ಮಾಡುವವನು. ಶಿವ ಕೋಪಿಷ್ಟ ಜೊತೆಗೆ ಹತ್ತು ಜನರನ್ನು ಹೊಡೆದು ಹಾಕುವಷ್ಟು ಬಲಿಷ್ಟ.

ಕಾಲೋನಿಯಲ್ಲಿ ಸರಸ ವಿರಸದ ಘಟನೆಗಳು ನಡೆಯುವಾಗಲೇ ಹೊರಗೆ ರಾಜಕೀಯ ಮತ್ತು ಸಂಚು ರೂಪಿತಗೊಳ್ಳುತ್ತಿರುತ್ತದೆ. ಹಾಗೆಯೇ ಶಿವನ ತಂದೆ ಮತ್ತು ಹಿಂದಿನ ಘಟನೆಗಳು ಸೇಡಿಗಾಗಿ ಹೊಂಚು ಹಾಕುತ್ತಿರುತ್ತವೆ.

ಕಾಲೋನಿಯ ಮಕ್ಕಳಿಗೆ ಒಂದು ಆಟದ ಮೈದಾನ ಮಾಡಿಕೊಡಬೇಕು ಎಂಬ ಧಾವಂತದಲ್ಲಿ ಶಿವ ಮತ್ತು ರಾಘವ ಎದುರು ಹಾಕಿಕೊಳ್ಳುವ ಸವಾಲುಗಳು ಕೆಂಡದಂಡೆಗಳಾಗಿ ತೆರೆಯ ಮೇಲೆ ಕಾಣುವಾಗ ಇಬ್ಬರೂ ದುರಂತ ನಾಯಕರು.

ವ್ಯವಸ್ಥೆ ಅಮಾಯಕರನ್ನು ಹೇಗೆ ದುಡಿಸಿಕೊಳ್ಳುತ್ತದೆ ಎಂಬುದು ಎದ್ದು ಕಾಣುವ ಹೊತ್ತಲ್ಲಿ ಪರ ವಿರೋಧ ಎರಡೂ ಗುಂಪುಗಳು ರಕ್ತಕ್ಕಾಗಿ ಹಂಬಲಿಸುತ್ತವೆ. ಮೇಲ್ನೋಟಕ್ಕೆ ರೌಡಿಸಂ ಎನಿಸಿದರೂ ಆಳದಲ್ಲಿ ರಾಜಕೀಯ ಮತ್ತು ಅಸ್ತಿತ್ವಕ್ಕೆ ಮುಗ್ಧ ಜೀವಗಳ ದುರಂತ ಮೆರವಣಿಗೆ ಎಂಬುದು ಭಾಸವಾಗುತ್ತದೆ.

ಕಿಷ್ಕಿಂದೆಯಂತಹ ಜಾಗಗಳಲ್ಲಿ ಕ್ಯಾಮೆರಾ ಇಟ್ಟು ಸಮರ್ಪಕ ನೆರಳು ಬೆಳಕಿನಾಟ ಮೂಡಿಸುವ ಪರಿ, ಕೈಚಳಕ ಎಲ್ಲವೂ ಅದ್ಭುತ ಎನಿಸುತ್ತದೆ. ಆ ಮೂಲಕ ಚಿತ್ರ ತಂಡದ ಶ್ರಮ ಎದ್ದು ಕಾಣುತ್ತದೆ.

ಡ್ರಾವಿಡ ಮೂಲದ ಕಥೆಗಳನ್ನು ವೆಟ್ರಿ ಮಾರನ್ ಸೇರಿದಂತೆ ತಮಿಳಿನ ಹೆಸರಾಂತ ನಿರ್ದೇಶಕರು ನಿರ್ವಹಿಸಿರುವ ರೀತಿಯಲ್ಲಿ ಈ ಕಥೆಯೂ ಕಾಣುವುದು ‘ಕಾಲೋನಿ’ಯ ಹೆಗ್ಗಳಿಕೆ.

ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ನಟನೆ ಜೊತೆಗೆ ನಿರ್ದೇಶಕರಾಗಿ ಭರವಸೆ ಮೂಡಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ರಾಜೀವ್ ಹನು ಹಾಗೂ ಪ್ಲೇಯಿಂಗ್ ಕಿಂಗ್ ಮಂಜು ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಪ್ಲೇಯಿಂಗ್ ಕಿಂಗ್ ಮಂಜು ದ್ವಿಪಾತ್ರವನ್ನು ನಿರ್ವಹಿಸಿರುವುದು ವಿಶೇಷವಾಗಿ ಕಾಣುತ್ತದೆ.

ಹಾಗೆಯೇ ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಪಾತ್ರಗಳು ಗಮನ ಸೆಳೆಯುತ್ತವೆ.

ಅಭಿನಂದನ್ ಕಶ್ಯಪ್ ಸಂಗೀತ, ಕಾರ್ತಿಕ್ ಎಸ್ ಛಾಯಾಗ್ರಹಣ ಹಾಗೂ ಪ್ರಮೋದ್ ತಲ್ವಾರ್ ಸಂಕಲನ ಚಿತ್ರಕ್ಕೆ ಪೂರಕ.

Social Share :

ಗಣ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಪಾರ್ಥು

ನಿರ್ದೇಶನ : ಹರಿಪ್ರಸಾದ್‌ ಜಕ್ಕ

ಕಾಲದಲ್ಲಿ ಸಂಚರಿಸುವ ಭ್ರಮೆ ವಾಸ್ತವ..

ಇದು ಅಮ್ಮನನ್ನು ಕಳೆದುಕೊಂಡ ಮಗನೊಬ್ಬನ ಕನಸು ಕನವರಿಕೆ ಮಾತು ಮುಂದುವರಿಕೆ ಮತ್ತು ವಿಚಿತ್ರ ಭ್ರಮೆಯೊಳಗಿನ ಆಟ. ಟೈಮ್ ಟ್ರಾವೆಲ್ ನಲ್ಲಿ ಕ್ಷಣ ಕ್ಷಣವೂ ಕುತೂಹಲ.

ಭೂತ, ಭವಿಷ್ಯ ಮತ್ತು ವರ್ತಮಾನದ ಜೊತೆ ಭ್ರಮಾಧೀನ ಸ್ಥಿತಿಯಲ್ಲಿ ಸಂಚರಿಸುವುದು.. ಒಂದು ರೀತಿಯಲ್ಲಿ ಕಾಲ ಯಂತ್ರದ ಜೊತೆ ಹೋರಾಡುವುದು..

ಗಣ ಎಂಬ ಕೆಚ್ಚೆದೆಯ ಯುವಕ 1993ರ ಕಾಲಘಟ್ಟದ ಭೂತ ಮತ್ತು 2022ರ ವರ್ತಮಾನದ ಜೊತೆ ಬದುಕುತ್ತಾ ಕಂಡು ಹಿಡಿಯುವ ರಹಸ್ಯಗಳು ಕ್ಷಣ ಕ್ಷಣ ಥ್ರಿಲ್ ಗೆ ಒಳಪಡಿಸುತ್ತವೆ.

ಮನೆಯಲ್ಲಿನ ಟೆಲಿಫೋನ್ (ಲ್ಯಾಂಡ್ ಲೈನ್) ಮತ್ತದರ ವಾಸ್ತವದ ನೆರಳು ನಿಜವೋ ಕಲ್ಪನೆಯೋ ಎಂಬ ಭ್ರಮೆಯನ್ನೇ ಸೃಷ್ಟಿಸುತ್ತದೆ. ಅದರಲ್ಲಿ ಮಾತನಾಡುವಾಗ ಗತಿಸಿದ ಕಾಲಘಟ್ಟ ಎದುರು ನಿಲ್ಲುತ್ತದೆ.

ಚಲನೆಯ ನಿಯಮವನ್ನೇ ಅನುಸರಿಸಿ ಮಾಡಲಾಗಿರುವ ಕಥೆಯಲ್ಲಿ ಭೌತಶಾಸ್ತ್ರದ ಸೂತ್ರಗಳು ತಳುಕು ಹಾಕಿಕೊಂಡ ವಿಶೇಷಗಳು ಕಾಣುವುದು ಮತ್ತು ಪ್ರೇಕ್ಷಕನ ಐಕ್ಯೂ ಪರೀಕ್ಷೆಗೆ ಒಳಪಡಿಸುವುದು ರೋಮಾಂಚಕ ವಿಷಯವಾಗುತ್ತದೆ.

ಗಣನ ಸಾಕು ತಾಯಿ ಸುಜಾತ 25 ವರ್ಷಗಳ ಹಿಂದೆ ಸಾವಿಗೀಡಾದ ಕುತೂಹಲದ ವಿಷಯ ಪತ್ತೆ ಹಚ್ಚುವ ದಾರಿಯಲ್ಲಿ ವರ್ತಮಾನದಲ್ಲಿ ಆಕೆಯ ಜೊತೆಗಿದ್ದವರನ್ನು ಪತ್ತೆ ಹಚ್ಚುವ ಸವಾಲು ಚಿತ್ರದ ಕುತೂಹಲದ ಇನ್ನೊಂದು ಘಟ್ಟ.

ಎಚ್.ಜಿ.ವೇಲ್ಸ್ ಅವರ ಟೈಮ್ ಟ್ರಾವೆಲ್ ನ ಕಥೆ ಟೈಮ್ ಮಷಿನ್ ಹುಟ್ಟಿಸುವ ಅದೇ ಕುತೂಹಲ ಹುಟ್ಟಿಸುವಲ್ಲಿ ನಿರ್ದೇಶಕರು ಇಲ್ಲಿ ಸಫಲ. ಅದೇ ರೀತಿ ಭ್ರಮೆಯನ್ನೂ ಕಾಯ್ದುಕೊಂಡಿರುವುದು ಚಿತ್ರದ ಹೆಚ್ಚುಗಾರಿಕೆ.

ಬುದ್ದಿಗೆ ಕಸರತ್ತು ನೀಡುವ ಹಂಬಲ ಇರುವವರು ಖಂಡಿತಾ ಚಿತ್ರ ನೋಡಬಹುದು. ಏಕೆಂದರೆ ಕಾಲದ ಚಲನೆಯ ಜೊತೆ ಹಾಡು, ಸಾಹಸ ಮನರಂಜನೆಯನ್ನು ಸಮವಾಗಿ ಬೆಸೆಯಲಾಗಿದೆ.

ಇಂಟರ್ ನೆಟ್ ಯುಗದಲ್ಲಿ ಭೂತವನ್ನು ಅಗೆದು ತೆಗೆಯಬಹುದು. ವರ್ತಮಾನ ಥ್ರಿಲ್ ಆಗಬಹುದು. ಭೂತದಲ್ಲಿ ನಿಂತರೆ ಅದೇ ಭವಿಷ್ಯ ವಾಗಿ ಕಾಣುತ್ತದೆ. ಫಿಜಿಕ್ಸ್ ನ ಚಲನೆಯ ನಿಯಮಗಳ ಅರಿವಿದ್ದರೆ ಈ ಚಿತ್ರ ಇನ್ನೂ ಹೆಚ್ಚು ಥ್ರಿಲ್.

ಗಣ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಲೀಲಾಜಾಲವಾಗಿ ನಟಿಸಿದ್ದಾರೆ. ಸುಜಾತ ಪಾತ್ರದಲ್ಲಿ ವೇದಿಕಾ ಕುತೂಹಲದ ಅಂಶವಾಗಿದ್ದರೆ, ಶೃತಿಯಾಗಿ ಯಶ ಶಿವಕುಮಾರ್ ಮುದ್ದಾಗಿ ಕಾಣುತ್ತಾರೆ. ಶಿವರಾಜ್ ಕೆ.ಆರ್.ಪೇಟೆ, ರವಿ ಕಾಳೆ, ಸಂಪತ್,
ಕೃಷಿ ತಾಪಂಡ, ವಿಶಾಲ್ ಹೆಗಡೆ, ರಮೇಶ್ ಭಟ್ ಪಾತ್ರಗಳು ಗಮನ ಸೆಳೆಯುತ್ತವೆ.

ಅನೂಪ್ ಸೀಳಿನ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಚಿತ್ರಕ್ಕೆ ಪೂರಕ.

Social Share :

ಪಾರು ಪಾರ್ವತಿ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಪಿ.ಬಿ.ಪ್ರೇಮ್ ನಾಥ್
ನಿರ್ದೇಶನ : ರೋಹಿತ್ ಕೀರ್ತಿ

ಆಸೆಗಳು ಹಕ್ಕಿಗಳಾದಾಗ..

ಮನುಷ್ಯನಿಗೆ ಹಕ್ಕಿಯಂತೆ ಹಾರುವ ಇಚ್ಚೆ ಪ್ರಬಲವಾದಾಗ ಇಲ್ಲದ ಸಾಹಸಗಳಿಗೆ ಪ್ರೇರೇಪಿಸುತ್ತದೆ. ಕೆಲವೊಮ್ಮೆ ಮನೆಯೆಂಬ ನರಕವೇ ಹೊರ ಜಗತ್ತಿಗೆ ದೂಡುತ್ತದೆ.

ಇಲ್ಲಿನ ಕಥಾ ನಾಯಕಿ ಪಾರ್ವತಿಗೆ ಮನೆಯ ನರಕ ಮತ್ತು ಹತ್ತಿಕ್ಕಿದ ಆಸೆಗಳ ಫಲವಾಗಿ ಸಾಹಸಕ್ಕೆ ತೆರೆದುಕೊಳ್ಳುವ ಮನಸ್ಸಾಗುತ್ತದೆ. ಆಗ ಆಕೆಗೆ ಸಹಕರಿಸುವುದು ಪಾಯಲ್ ಅಲಿಯಾಸ್ ಪಾರು ಎಂಬ ಸಾಹಸಿ ಹುಡುಗಿ.

ವಯಸ್ಸು ಆಯುಷ್ಯದ ಅರ್ಧ ದಾಟಿದೆ ಎಂಬಂತಹ ಸ್ಥಿತಿಯಲ್ಲಿ ಕಾಯಿಲೆಗಳು ಅರ್ಧ ಮುಕ್ಕುತ್ತವೆ. ಮನೆಯಲ್ಲಿ ಬೆಲೆ ಇಲ್ಲ. ಪ್ರೀತಿಯಂತೂ ಮೊದಲೇ ಇಲ್ಲ. ಹೀಗೆ ಪ್ರೀತಿ ವಂಚಿತ ಬದುಕು ಬದುಕುವ ಆಸೆಯನ್ನೇ ನಿರಾಕರಿಸುತ್ತದೆ.

ಆದರೆ ಇಲ್ಲಿ ಪಯಣವೆಂಬ ಸಾಹಸಕ್ಕೆ ತೆರೆದುಕೊಳ್ಳುತ್ತದೆ. ಪಾರು ಮತ್ತು ಪಾರ್ವತಿ ಇಬ್ಬರ ಸುದೀರ್ಘ ಪಯಣದ ಕಥೆಯಲ್ಲಿ ಕಾಣುವುದು ಕಣ್ಣು ಹಾಯಿಸಿದಷ್ಟು ಭೂಗೋಳದ ವಿಹಂಗಮ ಹೊರ ನೋಟದ ಸೌಂದರ್ಯ.

ಪಾರ್ವತಿ 60 ವರ್ಷ ದಾಟಿದ ಚಿರ ಯೌವನಿಗ ಹೆಣ್ಣು. ಆದರೆ ಯೌವನದಲ್ಲಿ ಸಾಧ್ಯವಾಗದ ಹೊರ ಸಾಹಸಗಳನ್ನು ಈಗ ಮಾಡುವಾಸೆ. ಪಾರು ವಿಶಾಲ ಮನಸ್ಸಿನವಳು. ಈ ಇಬ್ಬರ ಜರ್ನಿಯಲ್ಲಿ ಮಾತಿಗಿಂತ ಪ್ರಕೃತಿ ಸೌಂದರ್ಯವೇ ಹೆಚ್ಚು ಗಮನ ಸೆಳೆಯುವುದು ವಿಶೇಷ.

ಕಾರು ಮತ್ತು ಅದರ ಮೇಲೊಂದು ಬುಲೆಟ್ ಬೈಕ್. ಈ ಇಬ್ಬರ ಪಯಣ. ಜೀವನದ ನಶ್ವರತೆ ಕಾಣದಂತೆ ಸಾಗುವ ಜೀವನ ಪ್ರೀತಿ. ಕೆಲವೊಮ್ಮೆ ತರ್ಕಕ್ಕೆ ಸಿಗದ ಉಲ್ಲಾಸ ನಡವಳಿಕೆ.

ಪಯಣದಲ್ಲೇ ಮುಗಿದು ಹೋಗುವ ಕಥೆಯಲ್ಲಿ ಭಾವನಾತ್ಮಕ ಅಂಶಗಳು ಕಂಡೂ ಕಾಣದಂತೆ.. ಏಕೆಂದರೆ ಅದಮ್ಯ ಜೀವನ ದರ್ಶನದ ಬದಲು ಕೆಲವೊಮ್ಮೆ ಇಣುಕುವ ಕೃತಕತೆ.

ಒಂಟಿ ಮಹಿಳೆಗೆ ಮಾರಕ ರೋಗ ಆವರಿಸಿದೆ ಎಂಬುದು ಪ್ರಜ್ಞೆಯಲ್ಲಿ ಇಲ್ಲ. ಅದು ಜೊತೆಗಿರುವ ಪಾರುಗೆ ತಿಳಿದಾಗ ಆಕೆ ತೋರುವ ಔದಾರ್ಯ ಗಮನಾರ್ಹ. ಮನೆ ಮಂದಿಯ ಕೃತಕ ಪ್ರೀತಿಯಲ್ಲಿ ನರಳುವ ಬದಲು ವಿಹಾರ ಹೊರಡುವ ಪಾರ್ವತಿಗೆ ಅದಮ್ಯ ಜೀವನ ಪ್ರೇಮದ ಆಸೆಗಳು ಮೈದಳೆಯುವ ಪ್ರತಿ ಕ್ಷಣವನ್ನು ತೆರೆಯ ಮೇಲೆ ಮೂಡಿಸಿದ್ದಾರೆ ನಿರ್ದೇಶಕರು.

ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರದಲ್ಲಿ ಕಾರು ಕೂಡ ಪ್ರಮುಖ ಪಾತ್ರಧಾರಿ.

ದೀಪಿಕಾ ದಾಸ್ ಲೀಲಾಜಾಲವಾಗಿ ನಟಿಸಿದ್ದಾರೆ. ಪೂನಂ ಅವರಿಗೆ ಸುಧಾರಾಣಿ ಅವರ ಧ್ವನಿ ಇರುವುದೇ ವಿಶೇಷ.

ಅಬಿನ್ ರಾಜೇಶ್ ಛಾಯಾಗ್ರಹಣದಲ್ಲಿ ಊರು ಕೇರಿ ಸುಂದರ. ಆರ್ ಹರಿ ಸಂಗೀತ ಹಾಗೂ ಸಿ.ಕೆ.ಕುಮಾರ ಸಂಕಲನ ಚಿತ್ರಕ್ಕೆ ಪೂರಕ.

Social Share :

ರುದ್ರ ಗರುಡ ಪುರಾಣ ಯಶಸ್ಸು ಜನರ ಒಲವು ಚಿತ್ರದ ಗೆಲುವು..

Social Share :

ರಿಷಿ ಮುಖ್ಯ ಪಾತ್ರದಲ್ಲಿರುವ ‘ರುದ್ರ ಗರುಡ ಪುರಾಣ’ ಚಿತ್ರವು ಯಶಸ್ಸು ಕಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕಳೆದವಾರ ರಾಜ್ಯಾದ್ಯಂತ ಬಿಡುಗಡೆ
ಕಂಡಿದ್ದ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಜನರು ತೋರುತ್ತಿರುವ ಒಲವು ನಮಗೆ ಗೆಲುವು ನಟ ರಿಷಿ ಖುಷಿ ಹಂಚಿಕೊಂಡಿದ್ದು ಚಿತ್ರದ ಪ್ರಚಾರ ಸಭೆಯಲ್ಲಿ..

ಮಾಧ್ಯಮಗಳ ವಿಮರ್ಶೆಯ ಕಾರಣದಿಂದ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಯಿತು. ಹಾಗಾಗಿ ಮೊದಲಿಗೆ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸುವುದು ಕರ್ತವ್ಯವಾಗಿದೆ ಎಂದರು ರಿಷಿ.

ಈ ಐದು ದಿನಗಳಲ್ಲಿ ಥಿಯೇಟರ್ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿಗೆ ಆಗಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಹಾಗಾಗಿ ಇನ್ನೂ ಹೆಚ್ಚಿನ ಪ್ರೇಕ್ಷಕ ವರ್ಗ ಸಹಕರಿಸಲಿ ಎಂದು ಮನವಿ ಮಾಡಿದರು.

ನಿರ್ಮಾಪಕ ಲೋಹಿತ್ ಹಾಗೂ ನಿರ್ದೇಶಕ ನಂದೀಶ್ ಸಹ ಚಿತ್ರತಂಡದ ಸದಸ್ಯರಿಗೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ಕಲಾವಿದರ ಬಳಗದ ಶಿವರಾಜ ಕೆ ಆರ್ ಪೇಟೆ, ಗಿರೀಶ್ ಶಿವಣ್ಣ, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಕಲನಕಾರ ಮನು ಶೇಡ್ಗಾರ್, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಈ ಸಂದರ್ಭದಲ್ಲಿ ಖುಷಿ ಹಂಚಿಕೊಂಡರು.

Social Share :

ಬಲರಾಮನ ದಿನಗಳು ಚಿತ್ರೀಕರಣ ನಟ ಆಶಿಶ್ ವಿದ್ಯಾರ್ಥಿ ಸೇರ್ಪಡೆ..

Social Share :

ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದ್ದು, ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಚಿತ್ರ ತಂಡಕ್ಕೆ ಸೇರ್ಪಡೆಗೊಂಡಿರುವುದು ವಿಶೇಷ.

ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿರುವ ‘ಬಲರಾಮನ ದಿನಗಳು’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅಭಿನಯಿಸುತ್ತಿದ್ದಾರೆ.

ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಹನ್ನೊಂದು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ ಅವರು ತಮ್ಮ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿರುವುದೇ ವಿಶೇಷ.

ಸದ್ಯ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು ಆಶಿಶ್ ವಿದ್ಯಾರ್ಥಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ‌. ವಿಭಿನ್ನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಆಶಿಶ್ ವಿದ್ಯಾರ್ಥಿ ಅವರಿಗೆ ಸ್ವಾಗತ ಕೋರಿದೆ.

ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಆ ದಿನಗಳು’ ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶಿಸುತ್ತಿದ್ದಾರೆ.

ವಿನೋದ್ ಪ್ರಭಾಕರ್ ಜೋಡಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದು, ಈಗಾಗಲೇ ನಟ ಅತುಲ್ ಕುಲಕರ್ಣಿ ಚಿತ್ರದ ಭಾಗವಾಗಿರುವುದು ವಿಶೇಷ.

80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಇದು ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರವಾಗಿದೆ.

Social Share :