Cinema-Gossips
-

ಬಿಡುಗಡೆಗೆ ಕಾದಿರುವ ಕೋಮಲ್ ಚಿತ್ರ ರೋಲೆಕ್ಸ್ ನಿಂದ ರಿಲ್ಯಾಕ್ಸ್..
* ಅಕ್ಟೋಬರ್ 30 ತೆರೆಯ ಮೇಲೆ ರಿಲ್ಯಾಕ್ಸ್ * ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅವರ ನಕ್ಕು ನಗಿಸುವ ವರಸೆ ಮತ್ತೆ ಪ್ರೇಕ್ಷಕರ ಮುಂದೆ ಎದುರಾಗಲಿದೆ. ಇದರಿಂದಾಗಿ ಪ್ರೇಕ್ಷಕ ನಕ್ಕು ನಕ್ಕು ಹಗುರಾಗುತ್ತಾನೆ ಅರ್ಥಾತ್ ‘ರಿಲ್ಯಾಕ್ಸ್’ ಆಗುತ್ತಾನೆ.. ಹೌದು ಚಿತ್ರದ ಹೆಸರೇ ರಿಲ್ಯಾಕ್ಸ್..! ಈ ಮೊದಲು ‘ರೊಲೆಕ್ಸ್’ ಹೆಸರಿನಲ್ಲಿದ್ದ ಚಿತ್ರವೀಗ ರಿಲ್ಯಾಕ್ಸ್ ಆಗಿದೆ. ಚಿತ್ರತಂಡವೂ ಎಲ್ಲಾ ಜಂಜಾಟಗಳನ್ನು ಕಳೆದ ಹಗುರಾದ ರಿಲ್ಯಾಕ್ಸ್ ಭಾವನೆಯಲ್ಲೇ ತೇಲಾಡುತ್ತಿದೆ ಮತ್ತೆ ಚಿತ್ರವನ್ನು ಬಿಡುಗಡೆ ಮಾಡುವತ್ತ ಗಮನ ಹರಿಸಿದೆ.. ಕೋಮಲ್ ಕುಮಾರ್ ಹಾಗೂ…
-

ಯಶ್ ಕೈ ಮೀರಿದ ಯಶಸ್ಸು ಪರಿವರ್ತನೆ ಜಗದ ನಿಯಮ
ಪ್ಯಾನ್ ಇಂಡಿಯಾ ಡಾರ್ಲಿಂಗ್ ಅಥವಾ ರಾಕಿಂಗ್ ಸ್ಟಾರ್ ಯಶ್ ಕೊಂಚ ಬದಲಾಗಿದ್ದಾರೆ. ಒಂದು ಚಿತ್ರದ ಸೋಲು ಅಥವಾ ಭ್ರಮಾಧೀನಕ್ಕೊಳಪಟ್ಟ ಮನಸ್ಸಿನ ಮಾಗಿದ ಪ್ರಕ್ರಿಯೆಯಲ್ಲಿ ಆತ್ಮವಿಮರ್ಶೆಯ ಶೈಲಿಯಲ್ಲಿ ಅವರೀಗ ಮಾತನಾಡುತ್ತಿದ್ದಾರೆ.. ಈಚೆಗೆ ಬೆಂಗಳೂರಿನಲ್ಲಿ ನಡೆದ ಬಹು ಭಾಷಾ ಚಿತ್ರ ‘ರಾಮಾಯಣ’ ಹೊಸ ಟೀಸರ್ ಬಿಡುಗಡೆಯಲ್ಲಿ ನಿರ್ಮಾಪಕರಾಗಿ ರಾಮಾಯಣ ಆಶಯಗಳು ದೊಡ್ಡ ಮಟ್ಟದಲ್ಲಿ ಅವರು ಮಾಡುವ ಪ್ರಯತ್ನಗಳ ಕುರಿತು ಬೆಳಕು ಚೆಲ್ಲಿದರು.. ಕೆಲವೊಮ್ಮೆ ಗಡಿ ದಾಟಿ; ಸೋಲು ಗೆಲುವುಗಳನ್ನು ಮೀರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆಗ ಎದುರಾಗುವ ಸಂಕಷ್ಟಗಳು ನಮ್ಮ ದಾರಿಯ…
-

ಬೇಲ್ ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ದೇಶನ : ಪವನ್ ಒಡೆಯರ್ ಸಮಾಜದ ಲೋಪ ದೋಷ ತ್ರಿಮೂರ್ತಿಗಳ ನಾನಾ ವೇಷ ಬೆಂಗಳೂರು ಮಹಾನಗರವನ್ನು ‘ನಿವೃತ್ತರ ಸ್ವರ್ಗ’ ಎಂದು ಹೇಳುವುದು ವಾಡಿಕೆ. ಆದರೆ ಸ್ವರ್ಗ ಅನುಭವಿಸಬೇಕಾದ ನಿವೃತ್ತರು ಸಾಹಸಿಗಳಾಗುತ್ತಾರೆ. ವ್ಯವಸ್ಥೆಯ ದೊಡ್ಡ ಲೋಪದಿಂದ ಕಾನೂನು ಅಡಿಯಲ್ಲಿ ಶಿಕ್ಷೆಗೊಳಗಾದ ದುಷ್ಟರು ರಂಗೋಲಿ ಕೆಳಗೆ ನುಸುಳುವ ವರಸೆಯಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು.. ಆದರೆ ವ್ಯವಸ್ಥೆಯ ಲೋಪದಿಂದ ತಪ್ಪಿಸಿಕೊಂಡರೂ ಈ ತ್ರಿಮೂರ್ತಿಗಳ ಕಬಂಧ ಬಾಹುವಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.. ಅದೇ…
-

ಕಾಮನ್ ಮ್ಯಾನ್ ಚಿತ್ರವಿಮರ್ಶೆ
ರೇಟಿಂಗ್ : 3/5 ನಿರ್ಮಾಣ : ಎನ್.ನರಸಿಂಹಮೂರ್ತಿ ನಿರ್ದೇಶನ : ಓಂ ಸಾಯಿ ಪ್ರಕಾಶ್ ಸಾಮಾನ್ಯ ಮನುಷ್ಯ ಸಾಮಾನ್ಯ ವರಸೆಗಳು ಒಬ್ಬ ಸಾಮಾನ್ಯ ಮನುಷ್ಯ ಮುಖ್ಯಮಂತ್ರಿಯಾದರೆ ಏನೆಲ್ಲಾ ಬದಲಾವಣೆ ತರಬಹುದು ಎಂಬುದರ ಅಭಿವ್ಯಕ್ತಿಯಂತೆ ಇರುವ ಸಿನಿಮಾದಲ್ಲಿ ಕಾಣುವುದು ಸಾಮಾನ್ಯ ವರಸೆಗಳೇ.. ಅಚ್ಚರಿ ಎಂದರೆ ಈ ಸಾಮಾನ್ಯ ಮನುಷ್ಯ ಅಪರಿಮಿತ ಬುದ್ಧಿವಂತನಾದರೂ ಅಧಿಕಾರದ ಆಳ ಅಗಲ ಮತ್ತು ವ್ಯಾಪ್ತಿ ತಿಳಿಯದಷ್ಟು ಅಮಾಯಕ. ಇಲ್ಲಿನ ಅಧಿಕಾರಸ್ಥ ಸಿಎಂ ಆತನಿಗಿಂತಲೂ ಅಮಾಯಕ. ಹಾಗಾಗಿ ಜ್ಯೋತಿಷ್ಯ ಹೇಳುವ ಸ್ವಾಮೀಜಿಯ ಮಾತು ಕೇಳಿ ಅಧಿಕಾರದ…
-

ಸ್ಪಾರ್ಕ್ ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಗರಿಮಾ ಅವಿನಾಶ್ ನಿರ್ದೇಶನ : ಮಹಾಂತೇಶ್ ಹಂದ್ರಾಳ ಬ್ಯಾಂಕ್ ಗಳ ದಿವಾಳಿ ವಂಚನೆಯ ಸರಪಳಿ.. ಬಡ ಮಧ್ಯಮದ ವರ್ಗದ ಜನರಿಗೆ ಆಸರೆಯಾಗಿರಬೇಕಾದ ಸಹಕಾರಿ ಬ್ಯಾಂಕ್ ಗಳು ದಿವಾಳಿ ಏಳುತ್ತಾ ಅದೆಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿರುವುದು ನಿಜ ಜೀವನದಲ್ಲಿ ವಾಸ್ತವ ಸಂಗತಿಗಳು.. ಇದನ್ನೇ ಆಧರಿಸಿದ ಚಿತ್ರದಲ್ಲಿ ಮನುಷ್ಯನ ಸ್ವಾರ್ಥ ಅಧಿಕಾರ ಲಾಲಸೆ ಮತ್ತು ವಂಚನೆಯ ವಿವಿಧ ಮುಖಗಳು ಅನಾವರಣವಾಗುತ್ತಾ ಹೋಗುವುದು ಕ್ಷಣ ಕ್ಷಣದ ಥ್ರಿಲ್ಲಿಂಗ್.. ಇಲ್ಲಿ ಅಮರಜ್ಯೋತಿ ಸಹಕಾರಿ ಬ್ಯಾಂಕ್…
-

ಪ್ರೇಮ್ ನಿರಂಜನ್ ಸ್ಪಾರ್ಕ್ ನಲ್ಲಿ ಅಭಯ್ ವಸಿಷ್ಠ ಹೊಸ ಪರಿಚಯ
* ಇದೇ ವಾರ (ಸೆ.25) ಬಿಡುಗಡೆ * ಬ್ಯಾಂಕ್ ದಿವಾಳಿತನದ ಸುತ್ತಲೂ ಕಥೆ ಹೆಣೆಯಲಾಗಿರುವ ಆಕ್ಷನ್ ಥ್ರಿಲ್ಲರ್ ಚಿತ್ರ ‘ಸ್ಪಾರ್ಕ್’ ಇದೇ ವಾರ ಅಂದರೆ ಸೆಪ್ಟೆಂಬರ್ 25ರಂದು ಬಿಡುಗಡೆ ಕಾಣುತ್ತಿದ್ದು, ಕೊನೆಯ ಕ್ಷಣದಲ್ಲಿ ನಿರ್ಮಾಪಕರ ಪುತ್ರ ರಂಗ ಪ್ರವೇಶ ಮಾಡಿದ್ದಾರೆ. ಅಭಯ್ ವಸಿಷ್ಠ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ವೈಶಿಷ್ಟ್ಯ ಟ್ರೈಲರ್ ನಲ್ಲಿ ಅನಾವರಣಗೊಂಡಿದೆ. ಅಂದ ಹಾಗೆ ಅಭಯ್ ವಸಿಷ್ಠ ನಿರ್ಮಾಪಕ ಗರಿಮಾ ಅವಿನಾಶ್ ಅವರ ಪುತ್ರ. ವಿದೇಶಿ ರಂಗಭೂಮಿ ಪರಿಣಿತರಾದ ಅಭಯ್ ‘ಸ್ಪಾರ್ಕ್’…
-

ಬಿಡುಗಡೆಯತ್ತ ಕಾಮನ್ ಮ್ಯಾನ್ ಟ್ರೈಲರ್ ನಲ್ಲಿ ಗೌರಿ ಶಂಕರ್ ಅಬ್ಬರ
* ಸೆಪ್ಟೆಂಬರ್ 25ಕ್ಕೆ ಬಿಡುಗಡೆ * * ಸಾಯಿ ಪ್ರಕಾಶ್ 106 ನೇ ಚಿತ್ರ * * ವಿನಯ್ ಚಂದ್ರ ಸಂಗೀತ * ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಅದರ ಪರಿಣಾಮಗಳೇನು ಎಂಬುದರ ಸುತ್ತ ಕಥಾ ಹಂದರವಿರುವ ಕಾಮನ್ ಮ್ಯಾನ್ ಇದೇ ವಾರ ಅಂದರೆ ಸೆಪ್ಟೆಂಬರ್ 25 ರಂದು ಬಿಡುಗಡೆ ಕಾಣುತ್ತಿದೆ. ಸಾಮಾಜಿಕ ಕಾರ್ಯಕರ್ತರಾಗಿರುವ ಎನ್.ನರಸಿಂಹಸ್ವಾಮಿ ಕಥೆ ಬರೆದು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಹಿರಿಯ ನಿರ್ದೇಶಕ ಓಂ.ಸಾಯಿ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ ಮತ್ತು ಅವರ 106…
-

ಅಮರ್ಥ ಚಿತ್ರವಿಮರ್ಶೆ
ನಿರ್ಮಾಣ : ಡಾ.ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ದೇಶನ : ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಂ ಪ್ರೇಮ ಅಜರಾಮರ.. ಕಾಲವೂ ಮರೆಸದ ಪ್ರೀತಿ ಬಾಲ್ಯದಲ್ಲಿ ಮೈದಳೆಯುವ ಪ್ರೀತಿಯನ್ನು ಯೌವನ ಪೋಷಿಸುತ್ತದೆ. ಕಾಲ ಒಂದಾಗಲು ಅನುವು ಮಾಡಿಕೊಟ್ಟರೂ ಪರಿಸ್ಥಿತಿ ಮೇರೆ ಮೀರುತ್ತದೆ.. ಇಲ್ಲಿ ಪ್ರೇಮದ ಎರಡು ಸ್ತರಗಳಲ್ಲಿ ಅನೇಕ ಘಟನೆಗಳು ನಡೆದು ಹೋಗುತ್ತವೆ. ಬದುಕು ಎಂಬುದು ಅಚ್ಚರಿ ಮತ್ತು ತಿರುವುಗಳ ಮೂಟೆ ಎಂಬುದನ್ನು ಹೇಳಲು ಹೊರಟ ನಿರ್ದೇಶಕರ ಪ್ರಯತ್ನ ಸರಿ; ಆದರೆ ಅದನ್ನು ಪ್ರಸ್ತುವ…
-

ಬೆಂಟ್ಲಿ ಚಿತ್ರವಿಮರ್ಶೆ
ರೇಟಿಂಗ್ : 3/5 ನಿರ್ಮಾಣ : ಶ್ವೇತಾ ಬಾಲರಾಜ್ ನಿರ್ದೇಶನ : ದಿ.ಸಂತೋಷ್ ಬಾಲರಾಜ್ ಪ್ರೇಮ ವಿವಾಹಕ್ಕೆ ಫ್ರೆಂಡ್ಲಿ ದುಷ್ಟ ಸಂಹಾರಕ್ಕೆ ಡೆಡ್ಲಿ.. ಒಂದು ಪ್ರೇಮ ಕಥೆಯ ಸುತ್ತ ಹಲವು ವಿಷ ವರ್ತುಲಗಳಿರುತ್ತವೆ. ಅವುಗಳನ್ನು ಜಾಣ್ಮೆ ಮತ್ತು ಧೈರ್ಯದ ಸಾಹಸಗಳಿಂದ ಭೇದಿಸುವ ಯುವಕ ಪ್ರೇಮಿಗಳಿಗೆ ಆಪ್ತ ಬಂಧು.. ಆತನೇ ಬೆಂಟ್ಲಿ..! ಕಣ್ಣುಗಳನ್ನು ಬೆಂಕಿ ಉಂಡೆ ಮಾಡುವ ಬೆಂಟ್ಲಿ ಹೃದಯ ಥೇಟ್ ಆ ಕಾರಿನಷ್ಟೇ ಶ್ರೀಮಂತ..! ಪ್ರೇಮಿಗಳಿಗೆ ಮದುವೆ ಮಾಡಿಸಿ ಖುಷಿ ಪಡಿಸುವ ಬೆಂಟ್ಲಿ ಆ ಕಾರ್ಯದಲ್ಲಿ ದಾಖಲೆ…

Cinema-Gossip
-

ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..
ಈಗ್ಗೆ ನಲವತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ಕಮಲ್ ಹಾಸನ್ ಅವರು ಮುಖ್ಯ ಪಾತ್ರದಲ್ಲಿದ್ದ ಕನ್ನಡ ಚಿತ್ರ ಮರಿಯಾ ಮೈ ಡಾರ್ಲಿಂಗ್.. ಶೀರ್ಷಿಕೆ ಹಾಡಿನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಕಾಲದ ಆ ಚಿತ್ರದ ಹೆಸರು ಮತ್ತೆ ಹೊಸದಾಗಿ ಮೂಡಿಬರಲಿದೆ. ಅಂದ ಹಾಗೆ ಕನ್ನಡದಲ್ಲಿ ‘ಪಲ್ಲಕ್ಕಿ’, ’13’ ಹೀಗೆ ವಿಭಿನ್ನ ನೆಲೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ನರೇಂದ್ರಬಾಬು ಈಗ ‘ಮರಿಯಾ ಮೈ ಡಾರ್ಲಿಂಗ್’ ಶೀರ್ಷಿಕೆ ಇರುವ ಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದಾರೆ. ಅಪ್ಪಟ ಪ್ರೇಮಕಥೆಯಾಗಿರುವ ಈ ಚಿತ್ರವನ್ನು…
-

ನಿರ್ಭಯ 2 ಟೀಸರ್ ಅನಾವರಣ..
ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ನಿರ್ಭಯ 2’ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಯುವ ಕ್ರಮಗಳ ಕುರಿತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ…
Film Reviews
-

ಕೆಡಿ ಚಿತ್ರವಿಮರ್ಶೆ
ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ. ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ…
-

ಕ್ಯಾಲೆಂಡರ್ ಚಿತ್ರವಿಮರ್ಶೆ
ರೇಟಿಂಗ್ : 3/5 ನಿರ್ಮಾಣ : ಆದರ್ಶ್ ಗುಂಡುರಾಜ್ ನಿರ್ದೇಶನ : ನವೀನ್ ಶಕ್ತಿ ಋತುಚಕ್ರ ಪೂರ್ವ ಚರಿತೆ ಕಾಲಮಾನದಲ್ಲಿ ಬಳಲುವ ವನಿತೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ. ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು.. ಒಬ್ಬ ಉತ್ತಮ…

Politics
Latest News

Stay Connected
Categories
Uncategorized ಕ್ರೈಮ್-ನ್ಯೂಸ್ ಚಿತ್ರ ವಿಮರ್ಶೆ ರಾಜಕೀಯ-ವಿಶ್ಲೇಷಣೆ ವಿದ್ಯಮಾನ ಸಿನಿಮಾ-ಗಾಸಿಪ್ ಸಿನಿ ಹನಿ
Tags
About our Editor

SNEHAPRIYA NAGARAJ
Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

Search the Archives
Access over the years of investigative journalism and breaking reports

















