ಒಂದು ದೀರ್ಘ ಬಿಡುವಿನ ಬಳಿಕ ಹೆಸರಾಂತ ನಿರ್ಮಾಪಕ ಎಂ.ಎನ್.ಕುಮಾರ್ ನಿರ್ಮಿಸುತ್ತಿರುವ ಹಾಗೂ ಲೂಸ್ ಮಾದ ಯೋಗಿ ಮುಖ್ಯ ಪಾತ್ರದಲ್ಲಿರುವ ‘ಕಿರಿಕ್ ಶಂಕರ್ ‘ ಚಿತ್ರವು ತೆರೆಗೆ ಬರಲು ಸಜ್ಜುಗೊಂಡಿದೆ.
ಯೋಗಿ ಎದುರು ಅದ್ವಿಕ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ.
ಕೊರೊನಾ ಮಹಾಮಾರಿ ಆರ್ಭಟದ ಬಳಿಕ ಬಹಳ ದಿನಗಳ ನಂತರ ಮಾಧ್ಯಮದ ಸ್ನೇಹಿತರನ್ನು ಭೇಟಿ ಮಾಡುತ್ತಿರುವೆ. ಈ ಚಿತ್ರ ನಿಮಗಾಗಿ.. ಹಾಗಾಗಿ ನೀವೇ ಪ್ರಯತ್ನದಲ್ಲಿ ಗೆಲ್ಲಿಸಿಕೊಡಿ ಎಂದರು ನಿರ್ಮಾಪಕ ಎಂ.ಎನ್.ಕುಮಾರ್.

ಇದೊಂದು ಕೌಟುಂಬಿಕ ಚಿತ್ರ. ನಗರದ ಹೊರ ವಲಯದಲ್ಲಿ ಕಥೆ ನಡೆಯುತ್ತದೆ. ಜವಾಬ್ದಾರಿ ಇರುವ ಹುಡುಗನೊಬ್ಬ ಅದನ್ನು ಮರೆತು ನಡೆದರೆ ಏನಾಗುತ್ತದೆ ಎಂಬುದು ಚಿತ್ರದ ಸಾರಾಂಶ. ಯೋಗೇಶ್ ಹುಣಸೂರು ಈ ಕಥೆ ಬರೆದಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕ ಅನಂತರಾಜು.
ಎಂ.ಎನ್.ಕುಮಾರ್ ಚಿತ್ರರಂಗದಲ್ಲಿ ಹಿರಿಯರು ಅವರ ಚಿತ್ರದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಇದು ಪಕ್ಕಾ ಕಮರ್ಷಿಯಲ್ ಚಿತ್ರ. ತಾಂತ್ರಿಕವಾಗಿಯೂ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ ಎಂದರು ಲೂಸ್ ಮಾದ ಯೋಗಿ.

ನಾನು ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ನನ್ನ ಗುರುಗಳು. ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದೇನೆ ಸ
ನನಗೆ ಹರಸಿ ಹಾರೈಸಿ ಎಂದವರು ಅದ್ವಿಕ.
ಸಂಗೀತ ನಿರ್ದೇಶಕ ವೀರ್ ಸಮರ್ಥ್ ಹಾಡುಗಳ ಬಗ್ಗೆ ವಿವರ ನೀಡಿದರು.
ಯೋಗೀಶ್ ಹುಣಸೂರು ನಟ ರಿತೇಶ್, ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಳ್ ರಾಜ್ ಹಾಜರಿದ್ದರು.
