Snehapriya.com

November 15, 2024

ಕ್ರೈಮ್-ನ್ಯೂಸ್

ಅಗ್ನಿ ಶಾಮಕ ರಕ್ಷಾ ಕವಚ ವಾಹನ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

Social Share :


ಅಕಸ್ಮಾತ್ ಅಗ್ನಿ ಅವಘಡ ಸಂಭವಿಸಿದ ಪಕ್ಷದಲ್ಲಿ ಅದನ್ನು ಸಮರ್ಥವಾಗಿ ನಂದಿಸುವ ಮೂಲಕ ಜನರ ಪ್ರಾಣ ರಕ್ಷಣೆ ಮಾಡುವ ’90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರಂ ವಾಹನ’ ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಲೋಕಾರ್ಪಣೆ ಮಾಡಿದರು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಆಶ್ರಯದಲ್ಲಿ ಅಕ್ಟೋಬರ್ 20ರ ಗುರುವಾರ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಅವರು ’90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರಂ ವಾಹನ’ ಲೋಕಾರ್ಪಣೆ ಹಾಗೂ ಹಸಿರು ದೀಪಾವಳಿ ಸಾರ್ವಜನಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಗ್ನಿ ಅವಘಡಗಳನ್ನು ಸಮರ್ಥವಾಗಿ ನಿಭಾಯಿಸುವ ವ್ಯವಸ್ಥೆ ನಮ್ಮಲಿದೆ. ಭಾರತದಲ್ಲಿ ಮುಂಬೈ ಹೊರತು ಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣವನ್ನು ಇದು ಸಾಧ್ಯವಾಗಿಸಿದೆ.

ನಗರ ಬೆಳೆಯಲು ಹಾಗೂ ಅಗ್ನಿ ದುರಂತಗಳನ್ನು ನಿಯಂತ್ರಣ ಮಾಡಲು 90 ಮೀಟರ್ ಏಣಿ ಉಪಯುಕ್ತವಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿರುವ ಗೃಹ ಸಚಿವರು, ಗೃಹ ಇಲಾಖೆ ಹಾಗೂ ಅಗ್ನಿಶಾಮಕ ದಳದ ಎಲ್ಲಾ ಮುಖ್ಯಸ್ಥರನ್ನು ಅಭಿನಂದಿಸುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದರು.

ವಾಹನದಲ್ಲಿ ಎತ್ತರಕ್ಕೆ ಹೋದ ಅನುಭದ ಬಗ್ಗೆ ವಿವರಿಸಿದ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಗೋಪುರದಲ್ಲಿ ಶಿಲಾವಿನ್ಯಾಸವನ್ನು ಕಂಡು ಆಶ್ಚರ್ಯವಾಯಿತು. ಆ ಕಾಲದಲ್ಲಿ ಎಷ್ಟು ಶ್ರಮವಹಿಸಿ ಶಿಲೆಯನ್ನು ಕೊಂಡೊಯ್ದಿದ್ದಾರೆ. ಅಶೋಕ ಸ್ಥಂಭ ವನ್ನು ಹತ್ತಿರದಿಂದ ಕಂಡು ಸಂತೋಷವಾಯಿತು ಎಂದು ವಿವರಿಸಿದರು.

ಮುಖ್ಯವಾಗಿ ಅಗ್ನಿ ಅವಘಡ ಎದುರಿಸಲು ನಮ್ಮಲ್ಲಿ ಸಮರ್ಥ ಪರಿಕರಗಳಿವೆ ಎಂಬುದೇ ಸಮಾಧಾನಕರ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಪರ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

Social Share :

ರಾಷ್ಟ್ರೀಯ ಚಾಂಪಿಯನ್ ಈ ಮಹಿಳಾ ಪೊಲೀಸ್ ತಂಡ

Social Share :

ಮಹಿಳೆಯರ ಹಿರಿಯರ ವಿಭಾಗದೊಂದಿಗೆ ಕ್ರೀಡಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನ ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊಮ್ಮಿದೆ..

ಈಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಫೆಡರೇಷನ್ ಕಪ್ ಪಂದ್ಯವಳಿಯ ಹಗ್ಗ ಜಗ್ಗಾಟ ವಿಭಾಗದಲ್ಲಿ ರಾಜ್ಯ ಪೊಲೀಸ್ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದು ಈ ಸಾಧನೆ ಮಾಡಿದೆ.

ಭಾರತೀಯ ಯೂತ್ ಅಂಡ್ ಸ್ಫೋಟ್ಸ್ ಫೆಡರೇಷನ್ ವತಿಯಿಂದ ಕಳೆದ ಅಕ್ಟೋಬರ್ 13ರಿಂದ 16ರವರೆಗೆ ಗೋವಾದ ಕಲಾಂಗುಟೆಯಲ್ಲಿ ನಡೆದ ರಾಷ್ಟ್ರೀಯ ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ರಾಜ್ಯ ಮಹಿಳಾ ಪೊಲೀಸ್ ತಂಡ ಈ ಸಾಧನೆ ಮಾಡಿದೆ.

ತಂಡದಲ್ಲಿ ವ್ಯವಸ್ಥಾಪಕ ಮಹಮದ್ ರಫಿ ಸೇರಿದಂತೆ ಸಂಯೋಜಕಿ ಮೇರಿ ಶೈಲಜಾ, ನಾಯಕಿ ಶೋಭಾ ಸಿ ಒಳಗೊಂಡಂತೆ ರೇಖಾ ಎನ್, ಶಾಂತಕುಮಾರಿ, ಹೇಮಾವತಿ, ಸೌಮ್ಯಲತಾ, ರಾಣಿ ಎಸ್, ದೀಪಿಕಾ ಹಾಗೂ ಯಶೋದಮ್ಮ ಇದ್ದರು.

ಪೊಲೀಸ್ ಮಹಾ ನಿರ್ದೇಶಕ (ಸಿಐಡಿ)ಪಿ.ಎಸ್.ಸಂಧು, ಎಡಿಜಿಪಿ ಶರತ್ ಚಂದ್ರ ಹಾಗೂ ಉಮೇಶ್ ಕುಮಾರ್, ಡಿಐಜಿ ರಮೇಶ್ ಬಾನೋತ್, ಎಸ್ ಪಿ ಸಾರಾ ಫಾತಿಮಾ ಹಾಗೂ ಹಿರಿಯ ಅಧಿಕಾರಿಗಳು ಮಹಿಳಾ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.

Social Share :